Saturday, May 4, 2024
Homeಕರಾವಳಿಉಡುಪಿಕರಾವಳಿ ಜನತೆಗೆ ಶೀಘ್ರವೇ 'ಪ್ರತ್ಯೇಕ ಮರಳು ನೀತಿ' - ಸಚಿವ ಮುರುಗೇಶ ನಿರಾಣಿ ಭರವಸೆ

ಕರಾವಳಿ ಜನತೆಗೆ ಶೀಘ್ರವೇ ‘ಪ್ರತ್ಯೇಕ ಮರಳು ನೀತಿ’ – ಸಚಿವ ಮುರುಗೇಶ ನಿರಾಣಿ ಭರವಸೆ

spot_img
- Advertisement -
- Advertisement -

ಬೆಂಗಳೂರು: ಕರಾವಳಿ ಜನರಿಗೆ ಗಣಿ ಹಾಗೂ ಭೂ ವಿಜ್ಞಾನ ಸಚಿವ ಮುರುಗೇಶ ನಿರಾಣಿ ಗುಡ್ ನ್ಯೂಸ್ ನೀಡಿದ್ದಾರೆ. ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಭಾಗಕ್ಕೆ ಪ್ರತ್ಯೇಕ ಮರಳು ನೀತಿ ರೂಪಿಸುವ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.

ವಿಧಾನಸಭೆಯಲ್ಲಿ ನಿನ್ನೆ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ಉಳ್ಳಾಲ ಶಾಸಕ ಯುಟಿ ಖಾದರ್, ರಾಜ್ಯಕ್ಕೆ ಒಂದೇ ರೀತಿಯ ಮರಳು ನೀತಿ ಸರಿಯಲ್ಲ. ಮಳೆಗಾಲಕ್ಕೆ ಮುನ್ನ ಕರಾವಳಿಗೆ ಪ್ರತ್ಯೇಕ ನೀತಿ ಜಾರಿಗೊಳಿಸಬೇಕು ಎಂದು ಸಚಿವರಲ್ಲಿ ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಸಚಿವ ಮುರುಗೇಶ ನಿರಾಣಿ, ಇದರ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಮರಳಿನ ಕೊರತೆಯಿಂದಾಗಿ ರಾಜ್ಯದ ಅನೇಕ ಭಾಗಗಳಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಪರಿಣಾಮ ಬೀರುತ್ತಿದೆ. ಶೀಘ್ರವೇ ಕರಾವಳಿಗೆ ಪ್ರತ್ಯೇಕ ಮರಳು ನೀತಿ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಸಕರಾದ ರಘಪತಿ ಭಟ್ ಮತ್ತು ಕುಮಾರ್ ಬಂಗಾರಪ್ಪ ಕೂಡ ತಮ್ಮ ಕ್ಷೇತ್ರದ ಜನತೆ ಎದುರಿಸುತ್ತಿರುವ ಮರಳು ಕೊರತೆಯ ವಿಷಯವನ್ನು ಪ್ರಸ್ತಾಪಿಸಿದರು. ಮರಳು ಸಾರ್ವಜನಿಕರಿಗೆ ಲಭ್ಯವಾಗಲಿದೆ ಮತ್ತು ನಿಯಮಗಳ ಪ್ರಕಾರ ಮರಳು ಹರಾಜು ನಡೆಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.

- Advertisement -
spot_img

Latest News

error: Content is protected !!