- Advertisement -
- Advertisement -
ನವದೆಹಲಿ :ಭಾರತದಲ್ಲಿ ಕೋವಿಡ್‌ನ ಮೊದಲ ಪ್ರಕರಣ ಪತ್ತೆಯಾಗಿ ಇಂದಿಗೆ ಒಂದು ವರ್ಷ ವಾಗಿದೆ. ಲಾಕ್‌ಡೌನ್, ಹಲವು ಕಠಿನ ನಿರ್ಬಂಧ ಹೇರಿದರೂ ದೇಶದಲ್ಲಿ ವೈರಸ್ ಹರಡುವಿಕೆ ನಿಯಂತ್ರಣ ಕಷ್ಟಸಾಧ್ಯವಾಗಿತ್ತು.ಮೊದಲ ಪ್ರಕರಣ ದೇಶಾದ್ಯಂತ ಹುಟ್ಟುಹಾಕಿದ ಆತಂಕ ಅಷ್ಟಿಷ್ಟಲ್ಲ. ವರ್ಷದಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖೆ 1.72 ಕೋಟಿಗೆ ತಲುಪಿದೆ.
1.52 ಲಕ್ಷ ಭಾರತೀಯರು ಸೋಂಕಿನಿಂದಾಗಿ ಜೀವತೆತ್ತಿದ್ದಾರೆ.ಖುಷಿಯ ವಿಚಾರವೆಂದರೆ ಈಗ ಭಾರತ ಲಸಿಕೆ ಪ್ರಕ್ರಿಯೆಯನ್ನು ಆರಂಭಿಸಿದೆ. ಕೊವಿಶೀಲ್ಡ್ ಮತ್ತು ಕೊವ್ಯಾಕ್ಸಿನ್ ಲಸಿಕೆಗಳು ಭಾರತೀಯರಿಗೆ ತಲುಪುತ್ತಿದ್ದು ದೇಶದಲ್ಲೀಗ ಚೇತರಿಕೆ ಪ್ರಮಾಣ 96.96 ಪ್ರತಿಶತಕ್ಕೆ ಏರಿಕೆಯಾಗಿದೆ.
- Advertisement -