Monday, June 8, 2026
Homeಕರಾವಳಿಮಂಗಳೂರುಮಂಗಳೂರು; ಪೊಲೀಸರು ಹಾಗೂ ಕೆನರಾ ಬ್ಯಾಂಕ ಮ್ಯಾನೇಜರ್ ಸಮಯಪ್ರಜ್ಞೆಯಿಂದಾಗಿ ಡಿಜಿಟಲ್ ಅರೆಸ್ಟ್ ನಿಂದ ಪಾರಾದ ಹಿರಿಯ...

ಮಂಗಳೂರು; ಪೊಲೀಸರು ಹಾಗೂ ಕೆನರಾ ಬ್ಯಾಂಕ ಮ್ಯಾನೇಜರ್ ಸಮಯಪ್ರಜ್ಞೆಯಿಂದಾಗಿ ಡಿಜಿಟಲ್ ಅರೆಸ್ಟ್ ನಿಂದ ಪಾರಾದ ಹಿರಿಯ ನಾಗರಿಕ

- Advertisement -
- Advertisement -

ಮಂಗಳೂರು; ಪೊಲೀಸರು ಹಾಗೂ ಕೆನರಾ ಬ್ಯಾಂಕ ಮ್ಯಾನೇಜರ್ ಸಮಯಪ್ರಜ್ಞೆಯಿಂದಾಗಿ ಡಿಜಿಟಲ್ ಅರೆಸ್ಟ್ ನಿಂದ ಹಿರಿಯ ನಾಗರಿಕ ಪಾರಾದ ಘಟನೆ ಮುಲ್ಕಿಯಲ್ಲಿ ನಡೆದಿದೆ.

ಪ್ರಕರಣದ ವಿವರ;

ಮುಲ್ಕಿ ಪೊಲೀಸ್ ಠಾಣಾ ಸರಹದ್ದಿನ ದಾಮಸಕಟ್ಟೆ ನಿವಾಸಿಗಳಾದ ಬೆನ್ಡ್ಡಿಕ್ ಪೆರ್ನಾಂಡಿಸ್ (84 ವರ್ಷ) ಹಾಗೂ ಲಿಲ್ಲಿ ಸಿಸಿಲಿಯ ಫೆರ್ನಾಂಡಿಸ್ (71 ವರ್ಷ ) ರವರು ದಿ: 01-12-2025 ರಂದು ಯಾರೋ ಅಪರಿಚಿತರು ಉತ್ತರ  ಪ್ರದೇಶದ ಸಿ.ಐ.ಡಿ ಪೊಲೀಸ್ ಎಂಬ ಸೊಗಿನಲ್ಲಿ  ಮೊಬೈಲ್ ಫೋನ್ ವಾಟ್ಸ್ ಅಪ್ ಮೂಲಕ ಸಂಪರ್ಕಿಸಿ, ಅವರುಗಳು 6 ಕೋಟಿ ಮೋಸ ಮಾಡಿದಾಗಿ ಅವರ ವಿರುದ್ದ ವಂಚನೆ ಪ್ರಕರಣ ದಾಖಲಾಗಿರುವುದಾಗಿ ನಂಬಿಸಿ, ಸೈಬರ್ ಕಳ್ಳರು ಡಿಜಿಟಲ್ ಅರೆಸ್ಟ್ಗೆ ಒಳಪಡಿಸಿ, ತಮ್ಮ ಖಾತೆಯಲ್ಲಿರುವ ಹಣವನ್ನು ತನಿಖೆಗಾಗಿ ವರ್ಗಾಹಿಸಬೇಕೆಂದು ಸೂಚಿಸಿದ ಮೇರೆಗೆ ಇವರು ಕಿನ್ನಿಗೋಳಿಯ ಕೆನರಾ ಬ್ಯಾಂಕಿನಲ್ಲಿದ್ದ ಅವರ ಬಾಬ್ತು ಖಾತೆಯಿಂದ ಸುಮಾರು 84 ಲಕ್ಷ ರೂಪಾಯಿ ಹಣವನ್ನು ಸೈಬರ್ ಕಳ್ಳರು ಸೂಚಿಸಿದ ಬ್ಯಾಂಕ್ ಖಾತೆಗೆ ರವಾನಿಸಲು ಬ್ಯಾಂಕಿಗೆ ವೃದ್ದರು ಹೋಗಿದ್ದು, ಈ ಸಮಯ ಕಿನ್ನಿಗೋಳಿಯ ಕೆನರಾ ಬ್ಯಾಂಕಿನ ಮ್ಯಾನೇಜರ್ ಶ್ರೀ ರಾಯಸ್ಟನ್ ರವರು ದೊಡ್ಡ ಮೊತ್ತದ ಹಣವನ್ನು ಯಾಕೆ ವರ್ಗಾವಣೆ ಮಾಡುತ್ತಿರುವ ಬಗ್ಗೆ ಸದ್ರಿಯವರ ಬಳಿ ವಿಚಾರಿಸಲಾಗಿ  ವೃದ್ದದಂಪತಿಗಳು ಸರಿಯಾದ ಉತ್ತರ ನೀಡದ ಕಾರಣ ಸಂಶಯಗೊಂಡು, ಸೈಬರ್ ವಂಚಕರು ಒದಗಿಸಿದಂತಹ ಖಾತೆಗೆ ಹಣವನ್ನು ವರ್ಗಾವಣೆ ಮಾಡದೇ, ಬ್ಯಾಂಕ್ ಮ್ಯಾನೇಜರ ರವರು ಕಿನ್ನಿಗೋಳಿ ಪರಿಸರದ ಬೀಟ್ ಸಿಬ್ಬಂದಿಯವರಾದ ಹೆಚ್ ಸಿ 683 ಯಶವಂತ ಕುಮಾರ ಹಾಗೂ ಠಾಣಾ ಗುಪ್ತವಾರ್ತೆ ಸಿಬ್ಬಂದಿ ಹೆಚ್ ಸಿ 802 ಕಿಶೋರ ರವರಿಗೆ  ದೂರವಾಣಿ ಕರೆ ಮಾಡಿ ಈ ಬಗ್ಗೆ ತಿಳಿಸಿರುತ್ತಾರೆ.

ಕೂಡಲೇ ಕಾರ್ಯಪ್ರವೃತ್ತರಾದ ಮುಲ್ಕಿ ಪೊಲೀಸರು ವೃದ್ದ ದಂಪತಿಗಳ ಮನೆಗೆ ತೆರಳಿ ಅವರ ಮೊಬೈಲ್ನ್ನು ಪರಿಶೀಲಿಸಿದ್ದು ಈ ಸಮಯ ಅವರು ಡಿಜಿಟಲ್ ಅರೆಸ್ಟ್ಗೆ ಒಳಗಾಗಿರುವುದು ಕಂಡುಬಂದಿದ್ದು ಕೂಡಲೇ ಪೊಲೀಸ್ ಸಿಬ್ಬಂದಿಗಳು ಬ್ಯಾಂಕ್ ಮ್ಯಾನೇಜರ ರವರಿಗೆ ಕರೆ ಮಾಡಿ ವಿಚಾರ ತಿಳಿಸಿ ವರ್ಗಾವಣೆ ಮಾಡದಂತೆ ಸೂಚಿಸಿ, ವೃದ್ದ ದಂಪತಿಗಳಿಗೆ ತಿಳುವಳಿಕೆ ನೀಡಿ, ವೃದ್ದ ದಂಪತಿಗಳ ಹಣವನ್ನು ಉಳಿಸಿರುತ್ತಾರೆ. ಇದರ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಯವರು ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ.

- Advertisement -

Latest News

error: Content is protected !!