Tuesday, June 30, 2026
Homeಕರಾವಳಿಮಂಗಳೂರುಬಂಟ್ವಾಳ; ಮಾಣಿಗುತ್ತು ಧರ್ಮಚಾವಡಿಯಲ್ಲಿ  ದಿನಾಂಕ 13-12-2025 ರಂದು ಕಂಬಳಕೋರಿ ನೇಮ

ಬಂಟ್ವಾಳ; ಮಾಣಿಗುತ್ತು ಧರ್ಮಚಾವಡಿಯಲ್ಲಿ  ದಿನಾಂಕ 13-12-2025 ರಂದು ಕಂಬಳಕೋರಿ ನೇಮ

- Advertisement -
- Advertisement -

ಬಂಟ್ವಾಳ; ಮಾಣಿಗುತ್ತು ಧರ್ಮಚಾವಡಿಯಲ್ಲಿ ವರ್ಷಪ್ರತಿ ನಡೆಯುವ ಕಂಬಳಕೋರಿ ನೇಮವು ಇದೆ ಬರುವ ತಾರೀಖು 06-12-2025 ನೇ ಶನಿವಾರ ಬೆಳಿಗ್ಗೆ ಗಂಟೆ 10:30ಕ್ಕೆ ಗೊನೆಕಡಿದು ತಾರೀಖು 13-12-2025 ನೇ ಶನಿವಾರ ರಾತ್ರಿ ಗಂಟೆ 08:00 ರಿಂದ ಶ್ರೀ ಗುಡ್ಡೆಚಾಮುಂಡಿ,ಪಂಜುರ್ಲಿ,ಮಲೆಕೊರತಿ ದೈವಗಳ ನೇಮ ಜರುಗಲಿದೆ. ಆದುದರಿಂದ ಭಕ್ತಾಭಿಮಾನಿ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಗಂಧ ಪ್ರಸಾದವನ್ನು ಸ್ವೀಕರಿಸಿ ದೈವಗಳ ಕೃಪೆಗೆ ಪಾತ್ರರಾಗಬೇಕಾಗಿ  ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಸಚಿನ್ ರೈ ಮಾಣಿಗುತ್ತು  ಮನವಿ ಮಾಡಿದ್ದಾರೆ.

ಕಾರ್ಯಕ್ರಮಗಳ ವಿವರ;

ತಾ:06-12-2025 ನೇ ಶನಿವಾರ ಬೆಳಿಗ್ಗೆ ಗಂಟೆ 10:30ಕ್ಕೆ ಗೊನೆ ಕಡಿಯುವುದು

ತಾ:13-12-2025 ನೇ ಶನಿವಾರ ಬೆಳಿಗ್ಗೆ 11:30 ಕ್ಕೆ ಕಂಬಳ ಗದ್ದೆಗೆ ಪೂಕರೆ ಹಾಕುವುದು

ಮದ್ಯಾಹ್ನ ಗಂಟೆ 12:00ಕ್ಕೆ ನಾಗತಂಬಿಲ

ಮಧ್ಯಾಹ್ನ ಗಂಟೆ 01:00 ರಿಂದ ಸಾರ್ವಜನಿಕ ಅನ್ನಸಂತರ್ಪಣೆ

ರಾತ್ರಿ ಗಂಟೆ 08:0೦ ರಿಂದ ಶ್ರೀ ಗುಡ್ಡೆಚಾಮುಂಡಿ, ಪಂಜುರ್ಲಿ, ಮಲೆಕೊರತಿ ದೈವಗಳ ನೇಮ,

- Advertisement -

Latest News

error: Content is protected !!