Wednesday, June 24, 2026
Homeಕರಾವಳಿಬೆಳ್ತಂಗಡಿಯ ಹಿರಿಯ ವಕೀಲ, ಶ್ರೀಧರ ಗೌಡ ನಿಧನ

ಬೆಳ್ತಂಗಡಿಯ ಹಿರಿಯ ವಕೀಲ, ಶ್ರೀಧರ ಗೌಡ ನಿಧನ

- Advertisement -
- Advertisement -

ಬೆಳ್ತಂಗಡಿ: ತಾಲೂಕಿನ ವಕೀಲರ ಸಂಘದ ಹಿರಿಯ ವಕೀಲ, ಮೂಲತಃ ಬೆಳ್ತಂಗಡಿ ತಾಲೂಕು ಕಡಿರುದ್ಯಾವರ ಗ್ರಾಮದವರಾದ ಶ್ರೀಧರ ಗೌಡ ಅವರು ಆ. 23 ಶನಿವಾರದಂದು ನಿಧನರಾಗಿದ್ದಾರೆ.

ಮೃತರು ಬೆಳ್ತಂಗಡಿಯ ವಕೀಲರಾದ ಈಶ್ವರ ಭಟ್ ಹಾಗೂ ಪುತ್ತೂರಿನ ಹಿರಿಯ ವಕೀಲರಾಗಿದ್ದ ಶಿವರಾಮ್ ಗೌಡ ರ ಬಳಿ ಜೂನಿಯರ್ ವಕೀಲರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿ, ಸುದೀರ್ಘ 36 ವರ್ಷ ಗಳ ಕಾಲ ಸೇವೆಯನ್ನು ಸಲ್ಲಿಸಿರುತ್ತಾರೆ.

ಮೃತರ ಅಂತಿಮ ಕಾರ್ಯವು ನಾಳೆ ನಡೆಯಲಿದ್ದು, ನಾಳೆ ಬೆಳಿಗ್ಗೆ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶವಿರುತ್ತದೆ ಎಂದು ಬೆಳ್ತಂಗಡಿಯ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ನವೀನ್ ಬಿ ಕೆ ತಿಳಿಸಿದ್ದಾರೆ.

ಮೃತರು ಪತ್ನಿ ವಿದ್ಯಾ ಹಾಗೂ ಮಗಳಾದ ವೈಷ್ಣವಿ ಹಾಗೂ ಬಂಧುವರ್ಗದವರನ್ನು ಅಗಲಿರುತ್ತಾರೆ. ಇವರ ನಿಧನಕ್ಕೆ ಬೆಳ್ತಂಗಡಿ ವಕೀಲರ ಸಂಘ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದೆ.

- Advertisement -

Latest News

error: Content is protected !!