Monday, April 29, 2024
Homeಮನರಂಜನೆಮಗ ಹಾಗೂ ಸೊಸೆಯ ಕಿರುಕುಳದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಹಿರಿಯ ನಟಿ

ಮಗ ಹಾಗೂ ಸೊಸೆಯ ಕಿರುಕುಳದ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಹಿರಿಯ ನಟಿ

spot_img
- Advertisement -
- Advertisement -

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿಯೊಬ್ಬರು  ತಮ್ಮ ಮಗ ಮತ್ತು ಸೊಸೆಯಿಂದ ಕಿರುಕುಳವಾಗುತ್ತಿದೆ ಎಂದು ಪೋಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಹೌದು..ಹಿರಿಯ ನಟಿ ಶ್ಯಾಮಲಾದೇವಿ ಮಗ ನಿತಿನ್ ಮತ್ತು ಸೊಸೆ ಸ್ಮಿತಾ ಅವರ ವಿರುದ್ಧ ದೂರು ನೀಡಿದ್ದಾರೆ. ಚಂದ್ರಲೇಔಟ್ ನ ಬಳಿ ಅಲ್ಲಿ ಎರಡು ಅಂತಸ್ತಿನ ಮನೆಯಲ್ಲಿ ಮಗನ ಜೊತೆಯಲ್ಲಿ ಶ್ಯಾಮಲಾದೇವಿ ವಾಸವಾಗಿದ್ದಾರೆ. ಶ್ಯಾಮಲಾದೇವಿಗೆ ವಯಸ್ಸಾಗಿರೋದ್ರಿಂದ ಮಗ ನಿತೀನ್ ಮತ್ತು ಸೊಸೆ ಇಬ್ಬರೂ ಮನೆಯಿಂದ ಹೊರಗೆ ಹಾಕೋದಕ್ಕೆ ಪ್ರಯತ್ನ ಮಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

ತಾಯಿ ಅನ್ನುವುದನ್ನೂ ಲೆಕ್ಕಿಸದೇ ಈ ಹಿರಿಯ ನಟಿಗೆ ಕೆಟ್ಟ ಕೆಟ್ಟ ಪದಗಳಿಂದ ಮಾತನಾಡೊದು, ಬೇಕಂತಲೇ ಹಿಂಸೆಯನ್ನು ಕೊಡೋದು ಮಾಡುತ್ತಿದ್ದಾರಂತೆ.  ಅಲ್ಲದೇ, ಕೈಗೆ ಸಿಕ್ಕ ವಸ್ತುಗಳಿಂದ ಶ್ಯಾಮಲಾದೇವಿಯ ಮೇಲೆ ಹಲ್ಲೆ ಮಾಡಿದ್ದಾರಂತೆ. ಮನೆಯಿಂದ ಹೊರಗೆ ಹಾಕೋದಕ್ಕಾಗಿಯೇ ಸರಿಯಾಗಿ ಮನೆಯಲ್ಲಿ ಊಟ ಹಾಕ್ತಿಲ್ಲ. ನನ್ನ ಊಟವನ್ನು ನಾನೇ ಮಾಡಿಕೊಂಡರೂ ಹಿಂಸೆ ಕೊಡ್ತಾ ಇದ್ದಾರೆ ಅಂತ ಬಸವನಗುಡಿ ಪೊಲೀಸ್ ಠಾಣೆಗೆ ಮಗ ಹಾಗೂ ಸೊಸೆ ಮೇಲೆ ದೂರು ನೀಡಿದ್ದಾರೆ ಶ್ಯಾಮಲಾ ದೇವಿ.

ಈ ಹಿಂದೆಯೂ ಶ್ಯಾಮಲಾದೇವಿ ಅವರು ಮಗ ಹಾಗೂ ಸೊಸೆಯ ವಿರುದ್ಧ ಹಿರಿಯ ನಾಗರೀಕರ ವೇದಿಕೆಗೆ ದೂರು ನೀಡಿದ್ದರು. ಆಗ ಮಗ ಮತ್ತು ಸೊಸೆ ತಪ್ಪೊಪ್ಪಿಕೊಂಡು ಮತ್ತೆ ತಾಯಿಯೊಂದಿಗೆ ವಾಸಿಸುತ್ತಿದ್ದರು. ಇದೀಗ ಮತ್ತೆ ತಾಯಿಗೆ ಕಿರುಕುಳ ಕೊಡುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.

- Advertisement -
spot_img

Latest News

error: Content is protected !!