Wednesday, June 24, 2026
Homeಕರಾವಳಿಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಸೆನ್‌ ಶೀಘ್ರವೇ ಬಂಟ್ವಾಳಕ್ಕೆ ಸ್ಥಳಾಂತರ

ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಸೆನ್‌ ಶೀಘ್ರವೇ ಬಂಟ್ವಾಳಕ್ಕೆ ಸ್ಥಳಾಂತರ

- Advertisement -
- Advertisement -

ಬಂಟ್ವಾಳ: ಜಿಲ್ಲಾ ಪೊಲೀಸ್‌ ವ್ಯಾಪ್ತಿಯ ಸೆನ್‌ (ಸೈಬರ್‌, ಎಕನಾಮಿಕ್‌ ಆ್ಯಂಡ್‌ ನಾರ್ಕೋಟಿಕ್ಸ್‌)ಪೊಲೀಸ್ ಠಾಣೆ ವರೆಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರವಾದ ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿದ್ದು, ಶೀಘ್ರವೇ ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳಲಿದೆ.

ಬಂಟ್ವಾಳ ನಗರ ಪೊಲೀಸ್‌ ಠಾಣೆಯ ಹಳೆಯ ಕಟ್ಟಡವು ಬ್ರಿಟಿಷರ ಕಾಲದಲ್ಲಿ ಜೈಲಾಗಿದ್ದು, ಇದೀಗ ಠಾಣೆಗಾಗಿ ಕಟ್ಟಡವನ್ನು ಪುನರ್ ನಿರ್ಮಿಸಲಾಗುತ್ತಿದೆ.

ಪ್ರಸ್ತುತ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಠಾಣೆಯ ಸ್ಥಳಾಂತರದಿಂದ ಹಲವಾರು ಪ್ರದೇಶದ ಜನರಿಗೆ ಪ್ರಯೋಜನವಾಗಬುಹುದು.

ಸದ್ಯ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್‌ ವ್ಯಾಪ್ತಿಯಲ್ಲಿ ಬರುವ ಯಾವುದೇ ಪ್ರದೇಶದಲ್ಲಿ ಸೈಬರ್‌ ಕ್ರೈಮ್‌ ಪ್ರಕರಣಗಳು ನಡೆದರೂ ಸಂತ್ರಸ್ತರು ದೂರು ನೀಡುವುದಕ್ಕೆ ಮಂಗಳೂರಿಗೆ ತೆರಳಬೇಕಿತ್ತು, ಆದರೆ ಮುಂದಿನ ದಿನಗಳಲ್ಲಿ ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ, ಬಂಟ್ವಾಳ ತಾಲೂಕಿನಂತಹ ದೂರ ಪ್ರದೇಶದ ನಾಗರಿಕರಿಗೆ ಇದರಿಂದ ಅನನುಕೂಲವಾಗಬಾಹುದು.

- Advertisement -

Latest News

error: Content is protected !!