Friday, June 5, 2026
Homeಕರಾವಳಿಮೂಡಬಿದರೆ: ಅಕ್ಕಸಾಲಿಗರೊಬ್ಬರು ಸಂಶಯಾಸ್ಪದವಾಗಿ ಸಾವು

ಮೂಡಬಿದರೆ: ಅಕ್ಕಸಾಲಿಗರೊಬ್ಬರು ಸಂಶಯಾಸ್ಪದವಾಗಿ ಸಾವು

- Advertisement -
- Advertisement -

ಮೂಡಬಿದರೆ: ಅಕ್ಕಸಾಲಿಗರೊಬ್ಬರು ಸಂಶಯಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೂಡಬಿದಿರೆ ಸಮೀಪ ಪಡುಮಾರ್ನಾಡು ಗ್ರಾಮದ ಬನ್ನಡ್ಕದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ತೋಡಾರು ಗ್ರಾಮದ ಸೀತಾರಾಮ ಆಚಾರ್ಯ (49) ಮೃತ ದುರ್ದೈವಿ. ಪೋಲಿಸರು ಸಂಶಯಾಸ್ಪದ ಸಾವೆಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂಜೆ ಬೈಕ್‌ನಿಂದ ಬಿದ್ದು ಸೀತಾರಾಮರು ಸಾವನ್ನಪ್ಪಿದ್ದಾರೆ. ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ. ಮೂಡಬಿದಿರೆಯ ಜ್ಯೋತಿನಗರದಲ್ಲಿ ಚಿನ್ನಾಭರಣ ತಯಾರಿಗೆ ಸಂಬಂಧಿಸಿದ ವಿಘ್ನೇಶ್‌ ಮೆಷಿನ್‌ ಕಟ್ಟಿಂಗ್‌ ಎಂಬ ಉದ್ಯಮವನ್ನು ಅವರು ನಡೆಸುತ್ತಿದ್ದರು.ಜ. 3ರಂದು ನಡೆಯಲಿದ್ದ ಅವರ ಪುತ್ರನ ಉಪನಯನದ ಕಾಗದವನ್ನು ವಿತರಿಸಿ ವಾಪಸು ಬರುತ್ತಿದ್ದ ವೇಳೆ ಬನ್ನಡ್ಕದ ಬಳಿ ಈ ದುರ್ಘಟನೆ ಸಂಭವಿಸಿದೆ. ಪೋಲಿಸರು ಸಂಶಯಾಸ್ಪದ ಸಾವು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!