Thursday, July 16, 2026
Homeಅಪರಾಧಗೇಮಿಂಗ್ ಆ್ಯಪ್‌ನಲ್ಲಿ ಕೋಟಿ ಕೋಟಿ ಹಣ ಕಳೆದುಕೊಂಡ ಖಾಸಗಿ ಕಂಪನಿಯ ಉದ್ಯೋಗಿ

ಗೇಮಿಂಗ್ ಆ್ಯಪ್‌ನಲ್ಲಿ ಕೋಟಿ ಕೋಟಿ ಹಣ ಕಳೆದುಕೊಂಡ ಖಾಸಗಿ ಕಂಪನಿಯ ಉದ್ಯೋಗಿ

- Advertisement -
- Advertisement -

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಗೇಮಿಂಗ್ ಆ್ಯಪ್‌ ನ ಮೂಲಕ ವಂಚನೆ ಹೋಗುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಇದೀಗ ನಗರದ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಗೇಮಿಂಗ್ ಆ್ಯಪ್‌ ನಲ್ಲಿ ಕೋಟಿ ಕೋಟಿ ಹಣ ಕಳೆದುಕೊಂಡಿದ್ದಾರೆ. ಆ್ಯಪ್‌ ವಿರುದ್ಧ ಸೆಂಟ್ರಲ್ ಸಿಇಎನ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಹಣ ಕಳೆದುಕೊಂಡ ಉದ್ಯೋಗಿ ನಿಶಾಂತ್ ಶ್ರೀವತ್ಸ. ಇವರು ಪಾಕೇಟ್ 52ರ ಮೂಲಕ ಹಣವನ್ನು ಕಳೆದುಕೊಂಡಿದ್ದು, ಸಣ್ಣ ಪುಟ್ಟ ಬೆಟ್ಟಿಂಗ್ ನಲ್ಲಿ ಗೆಲುವಾಗಿದ್ದು, ದೊಡ್ಡ ಮೊತ್ತದೆ ಬೆಟ್ಟಿಂಗ್ ನಲ್ಲಿ ಸೋಲಿಸಲಾಗುತ್ತದೆ. ಅಷ್ಟೇ ಅಲ್ಲದೆ ನಾವು ಆಟವಾಡಿದ ಟೇಬಲ್‍ನ ಮಾಹಿತಿಯನ್ನೂ ಇಲ್ಲಿ ನೀಡುವುದಿಲ್ಲ. ಸಾಕಷ್ಟು ಲೋಪ, ಮೋಸಗಳು ಈ ಆ್ಯಪ್‌ನಲ್ಲಿದೆ. ಇಲ್ಲಿ ಯಾವುದೇ ರೀತಿಯ ಭದ್ರತೆಯಿಲ್ಲ ಎಂದು ಆರೋಪಿಸಿದ್ದಾರೆ

ಇದೀಗ ವಂಚನೆಗೊಳಗಾದ ಉದ್ಯೋಗಿ ನೀಡಿದ ದೂರಿನಂತೆ ಪಾಕೇಟ್ 52 ಆ್ಯಪ್‌ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

- Advertisement -

Latest News

error: Content is protected !!