ಇವತ್ತು ಕೊರೊನಾ ಭಯಕ್ಕಿಂತ ಜನರನ್ನು ಹೆಚ್ಚಾಗಿ ಕಾಡುತ್ತಿರುವ ಭಯ ಅಂದ್ರೆ ಕೊರೊನಾ ಬಂದ್ರೆ ನಮ್ಮನ್ನು ನಮ್ಮ ಸುತ್ತಮುತ್ತಲಿನ ಜನ ಹೇಗೆ ನೋಡ್ತಾರೆ? ನಮ್ಮ ನೆಂಟರಿಷ್ಟರಿಗೆ ನಾವು ಮುಖ ತೋರಿಸೋದು ಹೇಗೆ ಅನ್ನೋದು. ಕೊರೊನಾ ಅನ್ನೋದು ಯಾರಿಗೆ ಬೇಕಾದರೂ ಬರಬಹುದು. ಕೆಲವೊಮ್ಮೆ ನಿರ್ಲಕ್ಷ್ಯದಿಂದ ಬಂದರೆ ಇನ್ನು ಕೆಲವೊಮ್ಮೆ ನಾವು ಮಾಡದ ತಪ್ಪಿಗೆ ಇನ್ಯಾರಿಂದಲೋ ಕೊರೊನಾ ಬರಬಹುದು. ಆದ್ರೆ ಹೇಗೆ ಬರಲಿ. ಈ ಹೆಮ್ಮಾರಿಯನ್ನು ಎದುರಿಸೋದಕ್ಕೆ ಸದ್ಯಕ್ಕಿರುವ ಔಷಧಿ ಅಂದ್ರೆ ಎಂದರೆ ಅದು ಧೈರ್ಯ.
ಈ ವಿಡಿಯೋ ನೋಡಿದ್ರೆ ಎಂತಹವರಿಗೂ ಕೊರೊನಾ ವಿರುದ್ಧ ಹೋರಾಡೋದಕ್ಕೆ ಖಂಡಿತವಾಗಿಯೂ ಧೈರ್ಯ ಬರುತ್ತೆ. ಇದು ಎಲ್ಲಿ ನಡೆದ ಘಟನೆ ಎಂಬುವುದರ ಮಾಹಿತಿ ಇಲ್ಲ. ಆದರೆ ಪ್ರತಿಯೊಬ್ಬರು ನೋಡಬೇಕಾದ ವಿಡಿಯೋ ಇದು. ಕೊರೊನಾದಿಂದ ಗುಣಮುಖವಾಗಿ ಬಂದಾಗ ಕೆಲವರು ಅವರನ್ನು ಅಪರಾಧಿಗಳಂತೆ ಕಾಣುತ್ತಾರೆ. ಆದ್ರೆ ಈ ಮಹಿಳೆ ಕೊರೊನಾ ಗೆದ್ದು ಬಂದಾಗ ಅವರ ಮನೆಯವರ ಸಂಭ್ರಮ ನೋಡಿ..ಆಕೆಗೆ ಅವರು ನೀಡಿದ ಸ್ವಾಗತ ನೋಡಿದ್ರೆ ನಿಜಕ್ಕೂ ಗ್ರೇಟ್ ಅನ್ಸುತ್ತೆ. ಆಕೆಯನ್ನು ಡ್ಯಾನ್ಸ್ ಮಾಡಿ ಸ್ವಾಗತಿಸುತ್ತಾರೆ. ಮನೆಯವರೊಂದಿಗೆ ಆಕೆಯೂ ಎಷ್ಟು ಖುಷಿಯಿಂದ ಹೆಜ್ಜೆ ಹಾಕುತ್ತಾಳೆ. ಸಮಾಜದಲ್ಲಿ ಇಂತಹ ಬದಲಾವಣೆಗಳಾಗಬೇಕು. ಇಂತಹ ಬದಲಾವಣೆಗಳಾದಾಗ ಖಂಡಿತವಾಗಿಯೂ ಕೊರೊನಾ ಅಲ್ಲಾ ಅದಕ್ಕಿಂತ ದೊಡ್ಡ ವೈರಸ್ ಬಂದರೂ ಎಂತಹವರೂ ಕೂಡ ಎದುರಿಸಬಹುದು. ಹಾಗಾಗಿ ನಾವು ಮೊದಲು ನಮ್ಮಲ್ಲಿರುವ ಕೊರೊನಾ ಬಗೆಗಿನ ತಪ್ಪು ತಿಳುವಳಿಕೆಗಳನ್ನು ಬದಲಾಯಿಸಿಕೊಳ್ಳಬೇಕು.