Monday, May 6, 2024
Homeತಾಜಾ ಸುದ್ದಿಸೊಳ್ಳೆಗಳಿಂದ ಕೊರೊನಾ ಹರಡುತ್ತೆ ಅನ್ನೋದು ನಿಜಾನಾ?

ಸೊಳ್ಳೆಗಳಿಂದ ಕೊರೊನಾ ಹರಡುತ್ತೆ ಅನ್ನೋದು ನಿಜಾನಾ?

spot_img
- Advertisement -
- Advertisement -

ನವದೆಹಲಿ : ಮಹಾಮಾರಿ ಕೊರೊನಾ  ದಿನದಿಂದ ದಿನಕ್ಕೆ ವೇಗವಾಗಿ ಎಲ್ಲೆಡೆ ವ್ಯಾಪಿಸುತ್ತಿದೆ. ನೆಮ್ಮದಿಯಿಂದ ಇದ್ದ ಹಳ್ಳಿಗಳನ್ನೂ ಕೂಡ ನರಕ ಮಾಡುತ್ತಿದೆ ಕೋವಿಡ್ . ಹಾಗಾಗಿ ಇದೀಗ ನಗರ ಹಳ್ಳಿ ಎಲ್ಲವೂ ಎಂಬಂತಾಗಿದೆ. ಎಲ್ಲಿ ನೋಡಿದರೂ ಕೊರೊನಾನದ್ದೇ ಮಾತು. ಈ ಕೊರೊನಾದ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಲೇ ಇವೆ. ಅದೇನಪ್ಪಾ ಅಂದ್ರೆ ಕೊರೊನಾ ಹಾಗೇ ಹರಡುತ್ತದೆ ಹೀಗೆ ಹರಡುತ್ತದೆ ಅಂತಾ. ಅದರಲ್ಲೂ ಕೋವಿಡ್ ಸೊಳ್ಳೆಗಳಿಂದ ಹರಡುತ್ತದೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಇದೀಗ ವಿಜ್ಞಾನಿಗಳು ಖಚಿತವಾದ ಮಾಹಿತಿಯನ್ನು ನೀಡಿದ್ದಾರೆ.

ಕನ್ಸಾಸ್​ ಸ್ಟೇಟ್​ ಯೂನಿವರ್ಸಿಟಿಯ ಬಿಯೋಸೆಕ್ಯೂರಿಟಿ ರೀಸರ್ಚ್​ ಇನ್​ಸ್ಟಿಟ್ಯೂಟ್​ನಲ್ಲಿ ಈ ಕುರಿತು ಅಧ್ಯಯನ ನಡೆಸಿದ ಸಂಶೋಧಕರು, ಸೊಳ್ಳೆಗಳಿಗೆ ಕೋವಿಡ್​ ವೈರಾಣುವಿನ ಸೋಂಕು ತಗುಲಿಸಲು ಸಾಕಷ್ಟು ಪ್ರಯತ್ನಿಸಿದರು. ಪರಿಸರದಲ್ಲಿ ಇರದಂಥ ವಾತಾವರಣ ಸೃಷ್ಟಿಸಿ ಅದಕ್ಕೆ ಸೋಂಕು ಅಂಟಿಸಲು ಯತ್ನಿಸಲಾಯಿತು. ಆದರೆ, ಅದೆಷ್ಟೇ ಪ್ರಯತ್ನಿಸಿದರೂ ಸೊಳ್ಳೆಗಳಿಗೆ ಕೊರೊನಾ ಸೋಂಕು ತಗುಲಲೇ ಇಲ್ಲ ಎಂದು ಸಂಸ್ಥೆಯ ನಿರ್ದೇಶಕ ಸ್ಟೀಫನ್​ ಹಿಗ್ಸ್​ ತಿಳಿಸಿದ್ದಾರೆ.

ಸೊಳ್ಳೆಗಳ ದೇಹದಲ್ಲಿರುವ ರಕ್ತಕ್ಕೆ ಕೊರೊನಾ ವೈರಾಣುವನ್ನು ಚುಚ್ಚುಮದ್ದು ಮೂಲಕ ಕೊಟ್ಟಾಗ, ಆ ರಕ್ತದಲ್ಲಿ ವೈರಾಣುವಿಗೆ ದ್ವಿಗುಣಗೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಸೊಳ್ಳೆಗಳ ರಕ್ತ ಪ್ರಮಾಣದಲ್ಲಿ ವೈರಾಣುಗಳ ಸಂಖ್ಯೆ ಹೆಚ್ಚಾಗಲಿಲ್ಲ. ಇದನ್ನು ಗಮನಿಸಿದಾಗ ಸೊಳ್ಳೆಗಳಿಂದ ಕೊರೊನಾ ವೈರಾಣು ಹರಡುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ ಎಂದು ಹೇಳಿದ್ದಾರೆ.

ಉದಾಹರಣೆಗೆ ಡೆಂಘೀ ಅಥವಾ ಕಮಾಲೆ ರೋಗವನ್ನು ತೆಗೆದುಕೊಳ್ಳುವುದಾದರೆ, ಈ ಕಾಯಿಲೆಗಳಿಗೆ ಕಾರಣವಾಗುವ ವೈರಾಣುಗಳ ರೀತಿ ಕೊರೊನಾ ವೈರಾಣುವಿನ ಪ್ರಮಾಣ ಸೊಳ್ಳೆಯ ರಕ್ತದಲ್ಲಿ ಗರಿಷ್ಠ ಪ್ರಮಾಣ ತಲುಪುವುದಿಲ್ಲ. ಕೊರೊನಾ ಸೋಂಕಿತರನ್ನು ಕಚ್ಚಿದರೂ ಸೊಳ್ಳೆಗಳ ದೇಹದಲ್ಲಿ ಕೊರೊನಾ ವೈರಾಣು ದ್ವಿಗುಣಗೊಳ್ಳುವುದಿಲ್ಲ ಎಂದು ವಿವರಿಸಿದ್ದಾರೆ. ಈ ಮೂಲಕ ಸೊಳ್ಳೆಗಳಿಂದ ಕೊರೊನಾ ಹರಡುತ್ತದೆ ಎಂಬ ವಿಚಾರವನ್ನು ವಿಜ್ಞಾನಿಗಳು ಸಂಪೂರ್ಮವಾಗಿ ಅಲ್ಲಗಳೆದಿದ್ದಾರೆ.

- Advertisement -
spot_img

Latest News

error: Content is protected !!