Monday, May 20, 2024
Homeತಾಜಾ ಸುದ್ದಿಮಾತೃ ಹೃದಯ ಪ್ರಾಣಿಗಳಲ್ಲೂ ಹೇಗಿರುತ್ತೆ ನೋಡಿ.. ತನ್ನ ಮರಿಗಳನ್ನು ರಕ್ಷಿಸಲು ಹೆಗ್ಗಣ ತೆಗೆದುಕೊಂಡ ರಿಸ್ಕ್ ಗೆ...

ಮಾತೃ ಹೃದಯ ಪ್ರಾಣಿಗಳಲ್ಲೂ ಹೇಗಿರುತ್ತೆ ನೋಡಿ.. ತನ್ನ ಮರಿಗಳನ್ನು ರಕ್ಷಿಸಲು ಹೆಗ್ಗಣ ತೆಗೆದುಕೊಂಡ ರಿಸ್ಕ್ ಗೆ ಹ್ಯಾಟ್ಯಾಫ್….

spot_img
- Advertisement -
- Advertisement -

ಅಮ್ಮಾ.. ಈ ಪದದ ಉಚ್ಛಾರಣೆಯಲ್ಲೇ ಏನೋ ಒಂದು ಶಕ್ತಿಯಿದೆ. ಈ ಶಬ್ದಕ್ಕಿರುವ ಪವರ್ ಸಾಮಾನ್ಯದಲ್ಲ. ಅಮ್ಮನ ಪ್ರೀತಿಯ ಮುಂದೆ ಬೇರೆಲ್ಲ ವ್ಯರ್ಥ. ಆ ಪ್ರೀತಿಯನ್ನು ಆಕೆಯೊಬ್ಬಳೇ ನೀಡೋದಕ್ಕೆ ಸಾಧ್ಯ. ಆಕೆಯ ಪಾತ್ರವನ್ನು ಆಕೆಯೊಬ್ಬಳೇ ನಿಭಾಯಿಸಬಲ್ಲಳು. ಮಾತೃ ಹೃದಯ ಅನ್ನೋದು ಕೇವಲ ಮನುಷ್ಯರಿಗಷ್ಟೇ ಸೀಮಿತವಲ್ಲ. ಪ್ರಾಣಿ, ಪಕ್ಷಿಗಳಲ್ಲಿ, ಗಿಡ ಮರಗಳಲ್ಲಿ ಎಲ್ಲದರಲ್ಲೂ ಅದು ಜಾಗೃತವಾಗಿರುತ್ತದೆ.

ಇಲ್ಲೊಂದು ಹೆಗ್ಗಣ ಬಿಲದೊಳಗೆ ಮನೆ ಮಾಡಿಕೊಂಡು ಅಲ್ಲಿ ಮರಿಗಳ ಆರೈಕೆ ಮಾಡುತ್ತಿತ್ತು. ಇದಕ್ಕಿದ್ದಂತೆ ಜೋರಾಗಿ ಮಳೆ ಸುರಿಯೋದಕ್ಕೆ ಆರಂಭವಾಗಿದೆ. ಇಷ್ಟಾಗಿದ್ದೇ ತಡ ಬಿಲದೊಳಗಿದ್ದ ಕೂಡಲೇ ಎಚ್ಚೆತ್ತುಕೊಂಡು ಒಂದೊಂದೇ ತನ್ನ ಪುಟ್ಟ ಮರಿಗಳನ್ನು ಸುರಕ್ಷಿತವಾಗಿ ಬೇರೆಡೆಗೆ ಶಿಫ್ಟ್ ಮಾಡಿದೆ. ಇದನ್ನು ಅಲ್ಲೇ ಇದ್ದ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಮಾತೃ ಹೃದಯ ಅನ್ನೋದು ಹೇಗಿರುತ್ತೆ ಅನ್ನೋದಕ್ಕೆ ಸಾಕ್ಷಿ ಹೇಳುವಂತಿದೆ ಈ ವಿಡಿಯೋ.

ಉಸಿರು ಬಿಗಿ ಹಿಡಿದು ನೋಡಿದೆ. ಯಕಶ್ಚಿತ್ (ಹಾಗನ್ನಲಾಗದು) ಒಂದು ಹೆಗ್ಗಣ ತನ್ನ ಮರಿಯನ್ನ ಉಳಿಸಿಕೊಳ್ಳೋಕೆ ತನ್ನ ಪ್ರಾಣವನ್ನೇ ಒತ್ತೆಇಟ್ಟು ಹೋರಾಡುತ್ತೆ. ನಾವು ಮನುಷ್ಯರಾಗಿ ಒಂದು ಮಗುವನ್ನ ಉಳಿಸಲಿಲ್ಲವಲ್ಲಾ.. ಛೆ..

Posted by Padma Shimoga on Saturday, 18 July 2020

- Advertisement -
spot_img

Latest News

error: Content is protected !!