Thursday, June 4, 2026
Homeಪ್ರಮುಖ-ಸುದ್ದಿಕರ್ನಾಟಕದಲ್ಲಿಂದು 4120 ಮಂದಿಗೆ ಕೊರೊನಾ ಪಾಸಿಟಿವ್, 91 ಮಂದಿ ಕೋವಿಡ್ ಗೆ ಬಲಿ, ಬೆಂಗಳೂರಿನಲ್ಲಿ 2156...

ಕರ್ನಾಟಕದಲ್ಲಿಂದು 4120 ಮಂದಿಗೆ ಕೊರೊನಾ ಪಾಸಿಟಿವ್, 91 ಮಂದಿ ಕೋವಿಡ್ ಗೆ ಬಲಿ, ಬೆಂಗಳೂರಿನಲ್ಲಿ 2156 ಕೇಸುಗಳು

- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಲೇ ಹೋಗುತ್ತಿದೆ. ಇವತ್ತು ಒಂದೇ ದಿನದಲ್ಲಿ 4120 ಮಂದಿಗೆ ಕರ್ನಾಟಕದಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 63772 ಕ್ಕೆ ಏರಿಕೆಯಾಗಿದೆ. ಇನ್ನು ಇವತ್ತು 91 ಮಂದಿಯನ್ನು ಕೊರೊನಾ ಬಲಿ ಪಡೆದುಕೊಂಡಿದೆ. ಅಲ್ಲದೇ ರಾಜ್ಯದಲ್ಲಿ ಇಂದು 1290 ಜನ ಕೊರೊನಾದಿಂದ ಗುಣಮುಖವಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಹಾಗೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಇಂದು 2156 ಹೊಸ ಪ್ರಕರಣಗಳು ವರದಿಯಾಗಿವೆ. ಆ ಮೂಲಕ ರಾಜ್ಯ ರಾಜಧಾನಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 24,316 ಕ್ಕೆ ಏರಿಕೆಯಾಗಿದೆ. ಇಂದು ಒಂದೇ ದಿನ 36 ಮಂದಿ ಬೆಂಗಳೂರಿನಲ್ಲಿ ಕೋವಿಡ್ ನಿಂದಾಗಿ ಸಾವನ್ನಪ್ಪಿದ್ದೆ, 253 ಮಂದಿ ಹೆಮ್ಮಾರಿಯನ್ನು ಮಣಿಸಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

- Advertisement -

Latest News

error: Content is protected !!