Tuesday, April 30, 2024
Homeಕರಾವಳಿಬಾಂಬ್ ಸ್ಪೋಟದ ವ್ಯಕ್ತಿಯ ಪತ್ತೆಗೆ ರಾಜ್ಯದ ಮದರಸಾ ಹಾಗೂ ಮಸೀದಿಗಳಲ್ಲಿ ಪರಿಶೀಲನೆ ನಡೆಯಲಿ; ಶರಣ್ ಪಂಪ್‌ವೆಲ್

ಬಾಂಬ್ ಸ್ಪೋಟದ ವ್ಯಕ್ತಿಯ ಪತ್ತೆಗೆ ರಾಜ್ಯದ ಮದರಸಾ ಹಾಗೂ ಮಸೀದಿಗಳಲ್ಲಿ ಪರಿಶೀಲನೆ ನಡೆಯಲಿ; ಶರಣ್ ಪಂಪ್‌ವೆಲ್

spot_img
- Advertisement -
- Advertisement -

ಮಂಗಳೂರು: ವಿಶ್ವ ಹಿಂದೂ ಪರಿಷತ್‌ನ (ವಿಎಚ್‌ಪಿ) ದಕ್ಷಿಣ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್‌ವೆಲ್ ‘ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹಾಗೂ ಪೊಲೀಸ್ ಅಧಿಕಾರಿಗಳು ರಾಜ್ಯದ ಮದರಸಾ ಹಾಗೂ ಮಸೀದಿಗಳ ಒಳಗೆ ಹೋಗಿ ಪರಿಶೀಲನೆ ನಡೆಸಿದರೆ ಬೆಂಗಳೂರಿನ ರಾಮೇಶ್ವರಂ ಕೆಫೆ ಹೋಟೆಲ್‌ನಲ್ಲಿ ಈಚೆಗೆ ನಡೆದ ಬಾಂಬ್ ಸ್ಫೋಟದ ಆರೋಪಿಯನ್ನು ಪತ್ತೆ ಹಚ್ಚಬಹುದು’ ಎಂದು ಹೇಳಿದರು.

‘ಮದರಸಾಗಳು ಭಯೋತ್ಪಾದಕರ ತಾಣವಾಗುತ್ತಿವೆ. ಭಯೋತ್ಪಾದರಿಗೆ ಶಿಕ್ಷಣ ಕೊಡುವ ವ್ಯವಸ್ಥೆಯನ್ನು ಅಲ್ಲಿನ ಮೌಲ್ವಿಗಳು ಮಾಡುತ್ತಿದ್ದಾರೆ’ ಎಂದು ಆರೋಪಿದರು.

ಇನ್ನು ಬಾಂಬ್ ಸ್ಫೋಟ ಮಾಡಿದ ಆರೋಪಿಯು ನಮಾಜ್ ಮಾಡಿ ಬಟ್ಟೆ ಬದಲಾಯಿಸಿದ್ದಾನೆ. ಬಳ್ಳಾರಿಯಲ್ಲಿ ಓಡಾಟ ಮಾಡಿದ್ದಾನೆ. ಭಟ್ಕಳಕ್ಕೆ ತೆರಳಿದ್ದಾನೆ ಎಂಬ ಮಾಹಿತಿಯನ್ನು ಎನ್‌ಐಎ ಅಧಿಕಾರಿಗಳು ಕೊಟ್ಟಿದ್ದಾರೆ. ಆದರೂ ಆರೋಪಿಯನ್ನು ಪತ್ತೆ ಹಚ್ಚಲು ಆಗುತ್ತಿಲ್ಲ. ಪೊಲೀಸ್ ಅಧಿಕಾರಿಗಳು ಹಾಗೂ ಎನ್‌ಐಎ ಅಧಿಕಾರಿಗಳಿಗೆ ನೆರವಾಗಲು ನಾವು ಸಿದ್ಧ. ಎನ್‌ಐಎ ಬಿಡುಗಡೆ ಮಾಡಿರುವ ಆರೋಪಿಯ ಫೋಟೊವನ್ನು ವಿಎಚ್‌ಪಿಯ ಟ್ವಿಟರ್ ಫೇಸ್‌ಬುಕ್ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದೇವೆ. ಈ ಚಹರೆಯ ವ್ಯಕ್ತಿ ಕಂಡು ಬಂದರೆ, ಪೊಲೀಸರಿಗೆ ಅಥವಾ ಎನ್‌ಐಎಗೆ ಮಾಹಿತಿ ತಿಳಿಸುವಂತೆ ಸೂಚಿಸಿದ್ದೇವೆ’ ಎಂದು ತಿಳಿಸಿದರು.

- Advertisement -
spot_img

Latest News

error: Content is protected !!