Friday, June 5, 2026
Homeಕರಾವಳಿಎಸ್ ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರದ ಕ್ಷೇಮವನ ಉದ್ಘಾಟನೆ: ಉತ್ತರ ಪ್ರದೇಶ...

ಎಸ್ ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರದ ಕ್ಷೇಮವನ ಉದ್ಘಾಟನೆ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಿಂದ ಕ್ಷೇಮವನಕ್ಕೆ ಚಾಲನೆ

- Advertisement -
- Advertisement -

ಬೆಂಗಳೂರು: ನೆಲಮಂಗಲ ತಾಲೂಕಿನ ಮಹದೇವಪುರದಲ್ಲಿ ನಿರ್ಮಾಣವಾಗಿರುವ ಎಸ್ ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕೇಂದ್ರ ಕ್ಷೇಮವನ್ನು  ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸಿಎಂ ಬಸವರಾಜ ಬೊಮ್ಮಾಯಿ, ಸಚಿವರಾದ ಡಾ. ಸುಧಾಕರ್, ನಾರಾಯಣ ಗೌಡ, ಭೈರತಿ ಬಸವರಾಜ, ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ, ಸಂಸದ ಬಿ.ಎನ್. ಬಚ್ಚೇಗೌಡ, ಶಾಸಕ ಡಾ. ಶ್ರೀನಿವಾಸ ಮೂರ್ತಿ, ಎಸ್. ವ್ಯಾಸ ವಿವಿ ವಿಸಿ ಡಾ. ನಾಗೇಂದ್ರ, ಹೇಮಾವತಿ ಹೆಗ್ಗಡೆ ಉಪಸ್ಥಿತಿರಿದ್ದರು.

20 ಎಕರೆ ಪ್ರದೇಶದಲ್ಲಿ  ಕ್ಷೇಮವನವನ್ನು ನಿರ್ಮಿಸಲಾಗಿದೆ‌‌. ಮಹೇಶ್ ಡಿಯೋಪೋಡೆ ವಿನ್ಯಾಸ ಮತ್ತು ಆಯುಷ್ ಕಾಸ್ಲಿವಾಲ್ ಪರಿಕಲ್ಪನೆಯಲ್ಲಿ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ‌ಕೂರ್ಮ, ನಂದಿ ಮತ್ತು ಗರುಡ ಸಂಕೇತಿಸುವ ವಿನ್ಯಾಸದ ಕಟ್ಟಡಗಳು ಆಕರ್ಷಕವಾಗಿದ್ದು, ಇಲ್ಲಿ  400 ಜನರಿಗೆ ಶುಶ್ರೂಷೆ ನೀಡಲು ಸ್ಥಳಾವಕಾಶವಿದೆ.

- Advertisement -

Latest News

error: Content is protected !!