Saturday, May 18, 2024
Homeತಾಜಾ ಸುದ್ದಿಕನ್ನಡಿಗನ ಕೈಚಳಕದಲ್ಲಿ ಮೂಡಲಿದೆ ಸುಭಾಸ್ ಚಂದ್ರ ಬೋಸ್ ಪ್ರತಿಮೆ; ಇಂಡಿಯಾ ಗೇಟ್ ಮುಂದೆ ಪ್ರತಿಷ್ಠಾಪನೆ

ಕನ್ನಡಿಗನ ಕೈಚಳಕದಲ್ಲಿ ಮೂಡಲಿದೆ ಸುಭಾಸ್ ಚಂದ್ರ ಬೋಸ್ ಪ್ರತಿಮೆ; ಇಂಡಿಯಾ ಗೇಟ್ ಮುಂದೆ ಪ್ರತಿಷ್ಠಾಪನೆ

spot_img
- Advertisement -
- Advertisement -

ಮೈಸೂರು: ದೆಹಲಿಯ ಇಂಡಿಯಾ ಗೇಟ್ ಮುಂಭಾಗದಲ್ಲಿ ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಎತ್ತರದ ಕಪ್ಪು ಕಲ್ಲಿನ ಏಕ ಶಿಲೆಯ ಮೂರ್ತಿ ನಿರ್ಮಾಣವಾಗುತ್ತಿದೆ. ಇಂತಹ ಸುವರ್ಣ ಅವಕಾಶ ಈಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಸಿಕ್ಕಿದ್ದು, ಕೇದಾರನಾಥ್‍ನಲ್ಲಿ ಶಂಕರಾಚಾರ್ಯರ ಮೂರ್ತಿಯನ್ನು ಕೆತ್ತಿ ಖ್ಯಾತಿ ಅವರದು.

 ಸುಭಾಷ್ ಚಂದ್ರ ಬೋಸ್ ಅವರು ಹಾಗೂಅವರ ತಂಡ ದೆಹಲಿಯಲ್ಲೇ ಉಳಿದು ಈ ಮೂರ್ತಿ ಕೆತ್ತನೆಯನ್ನು ಮಾಡಲಿದ್ದಾರೆ.

ಈ ಕುರಿತು ಮಾತನಾಡಿದ ಯೋಗಿರಾಜ್ ಅವರು, ಇಂಡಿಯಾ ಗೇಟ್‍ಗೆ ಕಲಾಕೃತಿ ಸೇರ್ಪಡೆ ಆಗುತ್ತಿರುವುದು ಹೆಮ್ಮೆಯ ವಿಷಯ. ಗ್ರಾನೇಟ್ ಕಲ್ಲಿನಲ್ಲಿನ ಸುಭಾಷ್‌ ಚಂದ್ರ ಅವರ ಮೂರ್ತಿ ಕೆತ್ತನೆ ಆಗುತ್ತದೆ. 30 ಅಡಿ ಕಲ್ಲಿನಲ್ಲಿ ಈ ಕೆತ್ತನೆ ಮಾಡಬೇಕು. ಬುಧವಾರ ದೆಹಲಿಗೆ ಹೋಗುತ್ತೇನೆ ಎಂದು  ತಿಳಿಸಿದರು.

ಈ ಮೊದಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ್ದ ಮೈಸೂರಿನ ಶಿಲ್ಪಿ ಯೋಗಿರಾಜ್ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ನೀಡಿದ್ದರು. ಅಷ್ಟೇ ಅಲ್ಲದೇ ಸ್ವತಃ ಪ್ರಧಾನಿ ಸಚಿವಾಲಯದ ಅಧಿಕಾರಿಗಳೇ ದೇಶಾದ್ಯಂತ ಶಿಲ್ಪಗಳನ್ನು ಹುಡುಕಾಡಿ ಕೇದಾರಾನಾಥದಲ್ಲಿ ಶಂಕರರ ಪುತ್ಥಳಿ ಕೆತ್ತಲು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದರು. 

- Advertisement -
spot_img

Latest News

error: Content is protected !!