Wednesday, June 3, 2026
Homeಕರಾವಳಿಉಡುಪಿಉಡುಪಿ; ಮಾಲೀಕ ಜ್ಯೂಸ್ ಕುಡಿಯುತ್ತಿದ್ದಾಗ ಸ್ಕೂಟರ್ ಎಗರಿಸಿದ ಕಳ್ಳ

ಉಡುಪಿ; ಮಾಲೀಕ ಜ್ಯೂಸ್ ಕುಡಿಯುತ್ತಿದ್ದಾಗ ಸ್ಕೂಟರ್ ಎಗರಿಸಿದ ಕಳ್ಳ

- Advertisement -
- Advertisement -

ಉಡುಪಿ : ಸ್ಕೂಟರ್ ಮಾಲೀಕ ಜ್ಯೂಸ್ ಕುಡಿಯುತ್ತಿದ್ದಾಗ ಕಳ್ಳನೊಬ್ಬ ಸ್ಕೂಟರ್ ಎಗರಿಸಿದ ಘಟನೆ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮ ಪಟ್ಟಣದ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ.

ಆದ್ರೆ ಏ.9ರ ಭಾನುವಾರ ಮಧ್ಯಾಹ್ನ 12.30ರ ಸುಮಾರಿಗೆ ಕೋಟ ಸಮೀಪದ ಉಪ್ಲಾಡಿ ನಿವಾಸಿ ರವಿ ಅವರು ಸಾಲಿಗ್ರಾಮ ಪೇಟೆಯಲ್ಲಿರುವ ಐಸ್ ಸ್ಪೈಸ್ ರೆಸ್ಟೋರೆಂಟ್ ಮುಂಭಾಗ ಸ್ಕೂಟರ್‌ ನಿಲ್ಲಿಸಿ ಜ್ಯೂಸ್ ಕುಡಿಯುತ್ತಿದ್ದರು. ಈ ವೇಳೆ ಯಾವುದೋ ಗಡಿಬಿಡಿಯಲ್ಲಿ ಬೈಕ್‌ ಕೀಯನ್ನು ಅದರಲ್ಲೇ ಇಟ್ಟಿದ್ದರು. ಇದನ್ನು ಗಮನಿಸಿದ ಕಳ್ಳ ಹಿಂದೆ ತಿರುಗುತ್ತಿದ್ದಂತೆ ಸ್ಕೂಟರ್ ಎಗರಿಸಿದ್ದಾನೆ. ಈ ಬಗ್ಗೆ ದೂರು ದಾಖಲಾಗಿದ್ದು ಪೊಲೀಸರು ಕಳ್ಳನಿಗಾಗಿ ಶೋಧ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!