Saturday, June 6, 2026
Homeಕರಾವಳಿಮಂಗಳೂರುಕಡಬ; ಸ್ಕೂಟರ್‌ ಸ್ಕಿಡ್‌ ಆಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಸಾವು

ಕಡಬ; ಸ್ಕೂಟರ್‌ ಸ್ಕಿಡ್‌ ಆಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಸಾವು

- Advertisement -
- Advertisement -

ಕಡಬ; ಸ್ಕೂಟರ್‌ ಸ್ಕಿಡ್‌ ಆಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ಅರಿಮಜಲು ಎಂಬಲ್ಲಿ ನಡೆದಿದೆ. ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ನಿಡ್ಡೋ  ರಾಮಚಂದ್ರ ಗೌಡ(65) ಮೃತರು.

ರಾಮಚಂದ್ರ ಅವರು ತನ್ನ ಸ್ಕೂಟರ್‌ನಲ್ಲಿ ಕಲ್ಲುಗುಡ್ಡೆಯಿಂದ ಎಂಜಿರ ರಸ್ತೆಯಲ್ಲಿ ಹೋಗುತ್ತಿದ್ದ ವೇಳೆ ಅರಿಮಜಲು ಎಂಬಲ್ಲಿ ಸ್ಕೂಟರ್‌ ನಿಯಂತ್ರಣ ತಪ್ಪಿ ಸ್ಕಿಡ್‌ ಆಗಿ ಸ್ಕೂಟರ್‌ ಸವಾರ ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದಿದ್ದು, ಪರಿಣಾಮ ತಲೆಯ ಬಲಭಾಗ, ಕೆನ್ನೆ ಭಾಗಕ್ಕೆ ಗಾಯವಾಗಿತ್ತು. ಕೂಡಲೇ ಅಲ್ಲಿದ್ದವರು ಗಾಯಾಳುವನ್ನು ಉಪಚರಿಸಿ ಕಡಬ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅಲ್ಲಿ ಅವರು ಮಾ.5ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರು ಪತ್ನಿ, ಒರ್ವ ಪುತ್ರ, ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.ಈ ಘಟನೆ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!