Sunday, June 7, 2026
Homeಕರಾವಳಿಮಂಗಳೂರುಮಂಗಳೂರು; ರೈಲಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಹೃದಯಾಘಾತವಾಗಿ ಗ್ರಾ.ಪಂ.ಸದಸ್ಯ ನಿಧನ

ಮಂಗಳೂರು; ರೈಲಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಹೃದಯಾಘಾತವಾಗಿ ಗ್ರಾ.ಪಂ.ಸದಸ್ಯ ನಿಧನ

- Advertisement -
- Advertisement -

ಮಂಗಳೂರು; ರೈಲಿನಲ್ಲಿ ಪ್ರಯಾಣಿಸುತ್ತಿರುವಾಗಲೇ ಹೃದಯಾಘಾತವಾಗಿ ಗ್ರಾ.ಪಂ.ಸದಸ್ಯ ನಿಧನರಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮುನ್ನೂರು ಗ್ರಾಮ ಪಂಚಾಯತ್ ಸದಸ್ಯ, ಕುತ್ತಾರು ಮದನಿನಗರ ನಿವಾಸಿ ಅಬ್ದುಲ್ ಅಝೀಝ್ ಮೃತ ವ್ಯಕ್ತಿ.


ಉದ್ಯಮಿಯಾಗಿದ್ದ ಅವರು ವ್ಯವಹಾರ ನಿಮಿತ್ತ ದಿಲ್ಲಿಗೆ ತೆರಳಿದ್ದರು. ಅಂಕೋಲಾ ಸಮೀಪ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಮುಂದಿನ ನಿಲ್ದಾಣ ಕುಮಟಾದಲ್ಲಿ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಯಿತಾದರೂ, ಅದಾಗಲೇ ಅಬ್ದುಲ್ ಅಝೀಝ್ ಮೃತಪಟ್ಟಿದ್ದರು. ಕಾಂಗ್ರೆಸ್ ಗ್ರಾಮ ಸಮಿತಿ ಅಧ್ಯಕ್ಷರಾಗಿದ್ದ ಅವರು ಸಾಮಾಜಿಕವಾಗಿ ತೊಡಗಿಸಿಕೊಂಡಿದ್ದರು.

- Advertisement -

Latest News

error: Content is protected !!