Saturday, June 6, 2026
Homeಕರಾವಳಿಮಂಗಳೂರುಮಂಗಳೂರು; ಸ್ಕೂಟರ್ ಹಾಗೂ ಟೆಂಪೋ ನಡುವೆ ಅಪಘಾತ, ಸ್ಕೂಟರ್ ಸವಾರ ಸಾವು

ಮಂಗಳೂರು; ಸ್ಕೂಟರ್ ಹಾಗೂ ಟೆಂಪೋ ನಡುವೆ ಅಪಘಾತ, ಸ್ಕೂಟರ್ ಸವಾರ ಸಾವು

- Advertisement -
- Advertisement -

ಮಂಗಳೂರು; ಸ್ಕೂಟರ್ ಹಾಗೂ ಟೆಂಪೋ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಸಾವನ್ನಪ್ಪಿರುವ ಘಟನೆ ಕೊಣಾಜೆ ನಡುಪದವು ಬಳಿ ಇಂದು ನಡೆದಿದೆ. ಕೊಣಾಜೆ ಗ್ರಾಮದ ನಡುಪದವು ಕಾಟುಕೋಡಿ ನಿವಾಸಿ ಮೊಯ್ದೀನ್ ಕುಂಞಿ ಬಾವು ಎಂಬವರ ಪುತ್ರ ಅಬೂಬಕರ್ ಸಿದ್ದೀಕ್ ರಝ್ವಿ(22) ಮೃತ ಯುವಕ.

ದೇರಳಕಟ್ಟೆ ಕಡೆಯಿಂದ ತೆರಳುತ್ತಿದ್ದ ಸ್ಕೂಟರ್ ಮತ್ತು ಮುಡಿಪು ಕಡೆಯಿಂದ ತೊಕ್ಕೊಟ್ಟಿನತ್ತ ಬರುತ್ತಿದ್ದ ಏಸ್ ಟೆಂಪೊ ಮಧ್ಯೆ ಈ ಅಪಘಾತ ನಡೆದಿದೆ. ಅಪಘಾತದ ತೀವ್ರತೆಗೆ ಸ್ಕೂಟರ್ ಭಾಗಶಃ ಟೆಂಪೊದೊಳಗೆ ನುಗ್ಗಿದ್ದು, ನಜ್ಜುಗುಜ್ಜಾಗಿದೆ. ಈ ವೇಳೆ ಟೆಂಪೋದ ಮೇಲೆ ಎಸೆಯಲ್ಪಟ್ಟ ಅಬೂಬಕರ್ ಸಿದ್ದೀಕ್ ಗಂಭೀರವಾಗಿ ಗಾಯಗೊಂಡಿದ್ದರು. ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಟೆಂಪೋ ಚಾಲಕ ಕೂಡಾ ಗಾಯಗೊಂಡಿದ್ದಾರೆ.

- Advertisement -

Latest News

error: Content is protected !!