Saturday, May 11, 2024
Homeತಾಜಾ ಸುದ್ದಿಮೇ 16 ರಿಂದಲೇ ಶಾಲೆ ಆರಂಭ: ಮಕ್ಕಳ ಕಲಿಕಾ ಕೊರತೆ ನೀಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮ

ಮೇ 16 ರಿಂದಲೇ ಶಾಲೆ ಆರಂಭ: ಮಕ್ಕಳ ಕಲಿಕಾ ಕೊರತೆ ನೀಗಿಸಲು ಕಲಿಕಾ ಚೇತರಿಕೆ ಕಾರ್ಯಕ್ರಮ

spot_img
- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಶಾಲೆಗಳು ಮೇ. 16 ರಿಂದ ಆರಂಭವಾಗಲಿದ್ದು, ಕಲಿಕಾ ಕೊರತೆ ನೀಗಿಸಲು ರೂಪಿಸಿರುವ ಕಲಿಕಾ ಚೇತರಿಕೆ ಕಾರ್ಯಕ್ರಮ ಮೇ. 30 ರವರೆಗೆ ನಡೆಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.

ಮೇ. 16 ರಿಂದ ಶಾಲೆ ಆರಂಭವಾಗಲಿದ್ದು, ಕಲಿಕಾ ಕೊರತೆ ನೀಗಿಸಲು ರೂಪಿಸಿರುವ ಕಲಿಕಾ ಚೇತರಿಕೆ ಕಾರ್ಯಕ್ರಮ ಮೇ. 30 ರವರೆಗೆ ನಡೆಯಲಿದೆ. ನಂತರ ಪ್ರಸಕ್ತ ಸಾಲಿನ ಪಠ್ಯಕ್ರಮ ಬೋಧನೆ ಶುರುವಾಗಲಿದೆ ಎನ್ನಲಾಗಿದೆ.

ರಾಜ್ಯದ ಶಾಲೆಗಳಲ್ಲಿ ಪ್ರಸಕ್ತ ವರ್ಷದಿಂದಲೇ ಮಕ್ಕಳಿಗೆ ಪಠ್ಯದ ಜೊತೆಗೆ ನೈತಿಕ ಶಿಕ್ಷಣ ಬೋಧಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಈ ಸಂಬಂಧ ಶಿಕ್ಷಣ ಇಲಾಖೆ ಅಗತ್ಯ ಸಿದ್ಧತೆಗೆ ಸಮಿತಿ ರಚಿಸಲು ತೀರ್ಮಾನಿಸಿದೆ. ನೈತಿಕ ಶಿಕ್ಷಣದಡಿ ಶಾಲಾ ಪಠ್ಯದಲ್ಲಿ ಯಾವ ಯಾವ ಕೃತಿ, ಗ್ರಂಥಗಳು, ವ್ಯಕ್ತಿಗಳ ಆದರ್ಶ ಮೌಲ್ಯಗಳನ್ನು ತರಬೇಕು. ಇದಕ್ಕೆ ಸಂಬಂಧಿಸಿದಂತೆ ಭಗವದ್ಗೀತೆ ಸೇರಿದಂತೆ ಇತರೆ ಯಾವ ಯಾವ ಮಹಾಕಾವ್ಯಗಳು, ಧರ್ಮಗ್ರಂಥಗಳು, ಕಥೆ ಕವನಗಳನ್ನು ಆಯ್ಕೆ ಮಾಡಬೇಕೆಂದು ಪರಿಶೀಲಿಸಿ ವರದಿ ನೀಡಲು ಶಿಕ್ಷಣ ತಜ್ಞರ ಸಮಿತಿ ರಚಿಸಲು ಇಲಾಖೆ ತೀರ್ಮಾನಿಸಿದೆ.

- Advertisement -
spot_img

Latest News

error: Content is protected !!