Wednesday, June 3, 2026
Homeಕರಾವಳಿಉಡುಪಿಉಡುಪಿ: ಒಣ ಹುಲ್ಲಿಗೆ ಇಟ್ಟ ಬೆಂಕಿಗೆ ತಗುಲಿ ಸುಟ್ಟು ಹೋದ ಸ್ಕೂಲ್ ಬಸ್

ಉಡುಪಿ: ಒಣ ಹುಲ್ಲಿಗೆ ಇಟ್ಟ ಬೆಂಕಿಗೆ ತಗುಲಿ ಸುಟ್ಟು ಹೋದ ಸ್ಕೂಲ್ ಬಸ್

- Advertisement -
- Advertisement -

ಉಡುಪಿ: ಒಣ ಹುಲ್ಲಿಗೆ ಇಟ್ಟ ಬೆಂಕಿಗೆ ತಗುಲಿ ಸ್ಕೂಲ್ ಬಸ್ ಸುಟ್ಟು ಹೋದ ಘಟನೆ ಮಣಿಪಾಲ ಅಲೆವೂರು ಪ್ರಗತಿ ನಗರದ ಕೇಂದ್ರೀಯ ವಿದ್ಯಾಲಯ ಪರಿಸರದಲ್ಲಿ ಸೋಮವಾರ ಸಂಜೆ ನಡೆದಿದೆ.

ಅಲೆವೂರು ಪ್ರಗತಿ ನಗರ ಪರಿಸರದಲ್ಲಿ ಒಣ ಹುಲ್ಲಿಗೆ ತಗಲಿದ ಬೆಂಕಿ ಪರಿಸರವಿಡಿ ವ್ಯಾಪಿಸಿದೆ. ಅಲ್ಲೇ ಸಮೀಪ ನಿಲ್ಲಿಸಿದ್ದ ಖಾಸಗಿ ಶಾಲಾ ಬಸ್ ಬೆಂಕಿಗಾಹುತಿಯಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ಬಸ್ ಸುಟ್ಟು ಕರಕಲಾಗಿತ್ತು. ಮಕ್ಕಳನ್ನು ಮನೆಗೆ ಕರೆದೊಯ್ದ ನಂತರ ಬಸ್ಸನ್ನು ನಿಲ್ಲಿಸಿರುವುದರಿಂದ ಬಸ್ಸಿನಲ್ಲಿ ಯಾರೂ ಇರಲಿಲ್ಲ. ಇದರಿಂದ ಭಾರೀ ದುರಂತವೊಂದು ತಪ್ಪಿದಂತಾಗಿದೆ.

- Advertisement -

Latest News

error: Content is protected !!