Thursday, June 25, 2026
Homeಕರಾವಳಿಕಿಶನ್ ಹೆಗ್ಡೆ ಕೊಲೆ ರಿವೇಂಜ್ ಗೆ ಸುರೇಂದ್ರ ಬಂಟ್ವಾಳ ಹತ್ಯೆ - ಆರೋಪಿ ಸತೀಶ್ ಸ್ವತಃ...

ಕಿಶನ್ ಹೆಗ್ಡೆ ಕೊಲೆ ರಿವೇಂಜ್ ಗೆ ಸುರೇಂದ್ರ ಬಂಟ್ವಾಳ ಹತ್ಯೆ – ಆರೋಪಿ ಸತೀಶ್ ಸ್ವತಃ ಹೇಳಿಕೆ.

- Advertisement -
- Advertisement -

ಬಂಟ್ವಾಳ: ನಟ&ರೌಡಿಶೀಟರ್ ಸುರೇಂದ್ರ (ಭಂಡಾರಿ)ಬಂಟ್ವಾಳ ಕೊಲೆ ಪ್ರಕರಣ ‌ಸಂಬಂಧ ಈಗ ಸುರೇಂದ್ರ‌ನ 22 ವರ್ಷ ಜೊತೆಗಿದ್ದ ಅಪ್ತ ಸತೀಶ್ ಸ್ವತಃ ತಾನೇ ಕೊಲೆ ಮಾಡಿರುವುದಾಗಿ ಹೇಳಿದ್ದು ಅಲ್ಲದೆ ಉಡುಪಿಯಲ್ಲಿ ನಡೆದ ಕಿಶನ್ ಹೆಗ್ಡೆ ಕೊಲೆಗೆ ರಿವೆಂಜ್ ಇದು ಎಂದು ಸ್ವಷ್ಟಪಡಿಸಿದ್ದಾನೆ. ನಾನು ಎರಡು ದಿನದಲ್ಲಿ ಪೊಲೀಸರಿಗೆ ಶರಣಾಗುವುದಾಗಿ ಆಡಿಯೋ ಮಾಡಿ ಹೇಳಿಕೆ ನೀಡಿದ್ದಾನೆ.

ವೈರಲ್ ಅಗಿರುವ ಆಡಿಯೋ “ಮಹಾ ಎಕ್ಸ್‌ಪ್ರೆಸ್‌” ವೆಬ್ ಸೈಟ್ ಗೆ ಲಭ್ಯವಾಗಿದೆ.

ಸುರೇಂದ್ರನ ಕೊಲೆ‌ ಬಳಿಕ 2:17 ನಿಮಿಷ ಆಡಿಯೋ ಮಾಡಿ ವೈರಲ್ ಮಾಡಿದ ಆರೋಪಿ ಸತೀಶ್ :

ಸತೀಶ್ ಮಾತು :- ನಮಸ್ತೆ ನಾನು ಸತೀಶ್ ಮಾತಾನಾಡುವುದು ನಿನ್ನೆ ರಾತ್ರಿ ವಾಸ್ತಿ ರೆಸಿಡೆನ್ಸಿಯಲ್ಲಿ ಸುರೇಂದ್ರ ಹತ್ಯೆಯಾಗಿದೆ ಅದನ್ನು ನಾನೇ ಮಾಡಿದ್ದು.‌ಇದು ಕಿಶನ್ ಹೆಗ್ಡೆ ಸಾವಿಗೆ ಪ್ರತಿಕಾರ. ಸುರೇಂದ್ರ ಬಡ್ಡಿ ವ್ಯವಹಾರ ಮಾಡಿ ಪಾಪದ ಹಣವನ್ನು ಈತ ಒಳ್ಳೆಯ ಜನರ ಸಾವಿಗೆ ಉಪಯೋಗಿಸಿದ್ದ. ನಾನು ಸುರೇಂದ್ರ ಜೊತೆ ಕಳೆದ ಸುಮಾರು 22 ವರ್ಷದಿಂದ ಒಟ್ಟಿಗೆ ಇದ್ದವ ಅವನ ಎಲ್ಲಾ ಅವ್ಯವಹಾರ ನನಗೆ ಗೊತ್ತಿತ್ತು. ಮೊನ್ನೆ ತಾನೇ‌ ನಡೆದ ಕಿಶನ್ ಹೆಗ್ಡೆ ಅಣ್ಣನ ಹತ್ಯೆಗೆ ಇವನು ಹಣದ ಸಹಾಯ ಮಾಡಿದ ನನಗೆ ವಿಷಯ ತಿಳಿದಿತ್ತು ನಾನು‌ ಅವನಿಗೆ ಹೇಳಿದೆ ನೀನು ತಪ್ಪು ಮಾಡುತ್ತಿದ್ದಿಯಾ. ಈ ವಿಷಯ ಹೊರಗಡೆ ಹೇಳಿದರೆ ನಿನ್ನನ್ನು ಸಾಯಿಸುತ್ತೇನೆ ಎಂದು ಬೆದರಿಕೆ ಹಾಕಿದ. ಮೊನ್ನೆ ಪನಮ ಯುವಕನಿಗೆ ರಾತ್ರಿ ಫೋನ್ ಮಾಡಿ ನಾನು ಮನೋಜ್ ಗೆ ಜೈಲಿನಲ್ಲಿ ಭೇಟಿಯಾಗಿ ಒಂದುವರೆ ಲಕ್ಷ ಹಣ ಮತ್ತು ಬಟ್ಟೆ ಕೊಡಲಿದ್ದೇನೆ ಇದಕ್ಕೆ ನಿಮ್ಮ ಸಹಾಯ ಬೇಕು ಎಂದು ಹೇಳುತ್ತಿದ್ದ. ಮತ್ತೆ ಒಂದು ದಿನಸ ರಾತ್ರಿ ಪನಮ ಯುವಕನಿಗೆ ಕರೆ ಮಾಡಿ ಹಣ ಮತ್ತು ಬಟ್ಟೆಯನ್ನು ತಲುಪಿಸಿದ್ದೇನೆ ಸಹಾಯ ಮಾಡಿದ್ದಕ್ಕೆ ಥೈಕ್ಸ್ ಎಂದು ಹೇಳಿದ್ದನ್ನು ನಾನು ಕೇಳಿದ್ದೇನೆ ಮತ್ತು ಈ ವಿಷಯದಲ್ಲಿ ನಾನು ಕಿಶನ್ ಅಣ್ಣನ ಜೊತೆ ಇದ್ದ ನನ್ನ ಗೆಳೆಯನಿಗೆ ಕಾಲ್ ಮುಖಾಂತರ ಕರೆ ಮಾಡಿ ಈ ವಿಷಯ ತಿಳಿಸಿದೆ.ಅವನಿಗೆ ಈ ವಿಷಯದಲ್ಲಿ ಕೋಪ ಮತ್ತು ಬೇಸರ ಇತ್ತು. ಇವನು ಇದೆ ರೀತಿ ಇದ್ದರೆ ಸುರೇಂದ್ರ ಮತ್ತು ಕೊಡಿಕೆರೆ ಮನೋಜನ ಜೊತೆ ಸೇರಿ ಇನ್ನೂ ಅನೇಕ ಅಮಾಯಕ ಯುವಕರ ಕೊಲೆಯಾಗುವುದರಲ್ಲಿ ಸಂಶಯವಿಲ್ಲ ಅದಕ್ಕಾಗಿ ನಾವು ಈ ಕೊಲೆ ಮಾಡಿದ್ದೇವೆ. ನಾವು ಈಗ ಕಾರವಾರದಲ್ಲಿದ್ದೇವೆ. ನಮಗೆ ಏನೂ ಮಾಡಬೇಕು ಎಂದು ತೊಚದೆ ಇಲ್ಲಿ ಬಂದಿದ್ದೇವೆ.‌ಇನ್ನೂ ಒಂದೆರಡು ದಿವಸದಲ್ಲಿ ಪೊಲೀಸರಿಗೆ ಶರಣಾಗತಿ ಅಗುತ್ತೇವೆ ಎಂದು 2 ನಿಮಿಷ 17 ಸೆಕೆಂಡ್ ಮಾತಾನಾಡಿ ಆಡಿಯೋ ವೈರಲ್ ಮಾಡಿದ್ದಾನೆ.

ಕಿಶನ್ ಹೆಗ್ಡೆ

ಕೊಲೆಯಾದ ಸುರೇಂದ್ರ ಬಂಟ್ವಾಳನ ಜೀವನ ನಡೆಸುತ್ತಿದ್ದ ಕುರಿತು ಪೋಸ್ಟ್ ವೈರಲ್ :

ವೈರಲ್ ಪೋಸ್ಟ್ :- ಈತ ಸುರೇಂದ್ರ ಭಂಡಾರಿ (ಸುರೇಂದ್ರ ಬಂಟ್ವಾಳ) ಅಮಾಯಕ ಬಡ ಜನರಿಗೆ ಚಕ್ರ ಬಡ್ಡಿ ದರದಲ್ಲಿ ತನ್ನ ಹಣವನ್ನು ಕೊಟ್ಟು ಅದೆಷ್ಟೋ ಬಡ ಕುಟುಂಬವನ್ನು ನಡು ಬೀದಿ ಗೆ ತಳ್ಳಿ ಹಾಕಿದ್ದಾನೆ. ಈತ ಒಂದು ಲಕ್ಷ ಹಣವನ್ನು ಬಡ ಜನರಿಗೆ ಬಡ್ಡಿ ರೂಪದಲ್ಲಿ ಕೊಟ್ಟು ಅವರಿಂದ ಸುಮಾರು ಹತ್ತು ಹದಿನೈದು ಲಕ್ಷ ಬೆಲೆ ಬಾಳುವ ಮನೆ ಸಂಪತು ಗಳನ್ನು ದಬ್ಬಾಳಿಕೆಯಿಂದ ಜಪ್ತಿ ಮಾಡಿ ಅನೇಕ ಬಡ ಜನರಿಗೆ ದಿಕ್ಕು ದಾರಿ ಇಲ್ಲದ ಹಾಗೆ ಮಾಡಿದ್ದಾನೆ. ಜಪ್ತಿ ಮಾಡಿದ ವಿಷಯವನ್ನು ಯಾರಿಗಾದರೂ ಹೇಳಿದರೆ . ನಾನು ರವಿ ಪೂಜಾರಿ ಯ ಸಹಚರ ನಿಮ್ಮನ್ನು ಜೀವಂತ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕುತ್ತಾನೆ ಆಗು ಕಾನೂನು ಕೂಡ ತನ್ನ ಕೈ ಮುಷ್ಟಿ ಯಲ್ಲಿ ಇದೆ ಎಂದು ಬಡ ಜನರಿಗೆ ದೌರ್ಜನ್ಯ ಮಾಡುತ್ತಾನೆ. ಚಕ್ರ ಬಡ್ಡಿಯು ಸ್ವಲ್ಪ ತಡವಾದಲ್ಲಿ ಹಣ ಪಡೆದವನ ತಂದೆ, ತಾಯಿ, ಹೆಂಡತಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸುತ್ತಾನೆ. ಹಾಗೂ ಮೊದಲು ಹಿಂದೂ ಸಂಘಟನೆಯಲ್ಲಿದ್ದ ಈತನ ಅವ್ಯವಹಾರ, ಮೋಸ, ವಂಚನೆಯನ್ನು ತಿಳಿದು ಹಿಂದೂ ಸಂಘಟನೆಯಿಂದ ಒದ್ದೊಡಿಸಿದ್ದಾರೆ. ಈಗ ಇತ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡು ಹಿಂದೂ ಸಂಘನೆಯ ವಿರುದ್ಧ ನಿಂತಿದ್ದಾನೆ. ಹಾಗೂ ಈತನ ಮನೆಗೆ ಐಟಿ (incom tax) ದಾಳಿ ಕೂಡ ನಡೆದಿದೆ ಹಾಗೂ ನಡೆದ ನಂತರ ಈತ ತನ್ನ ಆಸ್ತಿಗಳನ್ನು ಬೇರೆಯವರ ಹೆಸರಿನಲ್ಲಿ ಮಾಡಿಟ್ಟಿದ್ದಾನೆ. ರೌಡಿ ಶೀಟರ್ ಆದ ಈತ ನಡು ಬೀದಿಯಲ್ಲಿ ತಲ್ವಾರನ್ನು ಹಿಡಿದು ಬಿಜೆಪಿ ಕಾರ್ಯಕರ್ತರ ಕೊಲೆಗೆ ಯತ್ನಿಸಿ ಜೈಲಿಗೆ ಹೋಗಿ ಬಂದಿದ್ದಾನೆ. ಹಾಗೂ ತನ್ನ ಅನಾಚಾರಗಳನ್ನು ಮರೆಮಾಚಲು ಸಿನಿಮಾ (film) ನಿರ್ಮಾಪಕ, ನಟನಾಗಿದ್ದಾನೆ. ಹಾಗೂ ಸಿನಿಮಾ ಗಳನ್ನೂ ಮಾಡುವ ಈತ ಸಿನಿಮಾದ ವಿಲನ್ (villain) ಶೈಲಿಯನ್ನು ತನ್ನ ನಿಜ ಜೀವನದಲ್ಲಿ ಬಡ ಜನರ ಮೇಲೆ ತೋರಿಸುತ್ತಾನೆ ಎಂದು ಎಲ್ಲಾ ಕಡೆ ಪೋಸ್ಟ್ ವೈರಲ್ ಅಗುತ್ತಿದೆ.

ಆಡಿಯೋ ಕೇಳಲು ಈ ವಿಡಿಯೋ ಪ್ಲೇ ಮಾಡಿ

ಕಿಶನ್ ಹೆಗ್ಡೆ ಕೊಲೆಗೆ ರಿವೆಂಜ್ ಮಾಡಿ ಸುರೇಂದ್ರ ಬಂಟ್ವಾಳ ಹತ್ಯೆ – ಆರೋಪಿ ಸತೀಶ್ ಸ್ವತಃ ಹೇಳಿಕೆ.

Posted by Maha Xpress on Thursday, 22 October 2020
ಆಡಿಯೋ ಕೇಳಲು ಈ ವಿಡಿಯೋ ಪ್ಲೇ ಮಾಡಿ

ಕೊಲೆ‌ ಹಿಂದೆ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಕೈವಾಡ:

ಒಂದು ಕಡೆ ಕಿಶನ್ ಹೆಗ್ಡೆ ಹತ್ಯೆ ರಿವೆಂಜ್ , ಬಡ್ಡಿ ವ್ಯವಹಾರ ಮಾಡುತ್ತ ಭೂಗತ ಪಾತಕಿ ರವಿ ಪೂಜಾರಿ ಹೆಸರಲ್ಲಿ ಬೆದರಿಕೆ , ಮನೋಜ್ ಕೊಡಿಕೆರೆಗೆ ಫೈನಾನ್ಸ್ ಮಾಡಿದ ವಿಚಾರ ಹೀಗೆ ಮುಂತಾದ ವಿಚಾರಗಳನ್ನು ನೋಡುವಾಗ ಸುರೇಂದ್ರ ಭಂಡಾರಿ ಹತ್ಯೆ ಹಿಂದೆ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಕೈವಾಡ ಇರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಕಿಶನ್ ಹೆಗ್ಡೆ ಕೊಲೆಗೆ ರಿವೆಂಜ್ ಅಗಿ ಬೆಂಗಳೂರಲ್ಲಿ ಕಳೆದ ವಾರ ಉದ್ಯಮಿ ಮನೀಷ್ ಶೆಟ್ಟಿ ಕೊಲೆ ಮಾಡಿದ್ದರು ಈಗ ಎರಡನೇ ಹತ್ಯೆ ಬಿ.ಸಿ.ರೋಡಿನಲ್ಲಿ ಸುರೇಂದ್ರ ಬಂಟ್ವಾಳನದ್ದು ನಡೆದಿದೆ. ಯಾವುದಕ್ಕೂ ಆರೋಪಿ ಸತೀಶ್ ಬಂಧನದ ಬಳಿಕ ಪೊಲೀಸ್ ತನಿಖೆಯಲ್ಲಿ ಎಲ್ಲಾ ಸತ್ಯ ವಿಚಾರಗಳು ಬಯಲಾಗಲಿದೆ.

ಕರಾವಳಿಯಲ್ಲಿ ಸೈಲೆಂಟಾಗಿದ್ದ ಭೂಗತ ಲೋಕ ಮೂರು ವರ್ಷದ ಬಳಿಕ ಮತ್ತೆ ತನ್ನ ರಕ್ತಪಾತ ಮುಂದುವರಿಸುತ್ತಿದೆ.

- Advertisement -

Latest News

error: Content is protected !!