Wednesday, June 3, 2026
Homeಕರಾವಳಿಮಂಗಳೂರು: ನಕಲಿ ಚೆಕ್ ಬಳಸಿ 7.30ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿದ ಖತರ್ನಾಕ್ ದಂಪತಿ.. ಹೆಂಡತಿಯ...

ಮಂಗಳೂರು: ನಕಲಿ ಚೆಕ್ ಬಳಸಿ 7.30ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿಸಿದ ಖತರ್ನಾಕ್ ದಂಪತಿ.. ಹೆಂಡತಿಯ ಬಂಧನ, ಗಂಡ ಪರಾರಿ !

- Advertisement -
- Advertisement -

ಮಂಗಳೂರು: ನಕಲಿ ಚೆಕ್ ಬಳಸಿ ಬಾರಿ ಮೌಲ್ಯದ ಚಿನ್ನಾಭರಣ ಖರೀದಿಸಲು ಪ್ರಯತ್ನಿಸಿದ ಚಾಲಾಕಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಮಹಿಳೆಗೆ ಮೋಸ ಮಾಡಲು ಸಹಕರಿಸಿದ ಆಕೆಯ ಪತಿ ತಲೆ ಮರೆಸಿಕೊಂಡಿದ್ದಾನೆ.

ಬಂಧಿತ ಮಹಿಳೆಯನ್ನು ಕುಪ್ಪೆಪದವಿನ ಫರೀದಾ ಬೇಗಂ ಎಂದು ಗುರುತಿಸಲಾಗಿದ್ದು, ಆಕೆಯ ಪತಿ ರಮೀಜ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಫರೀದಾ ಬೇಗಂ ಮತ್ತು ರಮೀಜ್ ಕೈಕಂಬದ ಚಿನ್ನದಂಗಡಿಯೊಂದರಲ್ಲಿ 7.30 ಲಕ್ಷ ಮೌಲ್ಯದ ಚಿನ್ನ ಖರೀದಿಸಿ, 70 ಲಕ್ಷ ಮೌಲ್ಯದ ಚೆಕ್ ನ್ನು ಚಿನ್ನದಂಗಡಿಗೆ ನೀಡಿದ್ದರು. ಆದರೆ ಚೆಕ್ ನ ಸಹಿ ಮತ್ತು ಬ್ಯಾಂಕ್ ಖಾತೆಗೆ ಸಾಮ್ಯತೆ ಇರದಿದ್ದಾಗ ಈ ವಂಚನೆ ಪ್ರಕರಣ ಬಯಲಾಗಿದೆ.

ಕೂಡಲೇ ಕಾರ್ಯಪ್ರವೃತ್ತರಾದ ಬಜ್ಪೆ ಪೊಲೀಸರು ಉಳ್ಳಾಲದ ಧರ್ಮನಗರದ ಮನೆಯಲ್ಲಿದ್ದ ಆರೋಪಿ ಫರೀದಾ ಬೇಗಂನನ್ನು ಬಂಧಿಸಿದ್ದಾರೆ. ಆದರೆ ಆಕೆಯ ಪತಿ ತಲೆ ಮರೆಸಿಕೊಂಡಿದ್ದಾನೆ.

- Advertisement -

Latest News

error: Content is protected !!