Monday, June 29, 2026
Homeತಾಜಾ ಸುದ್ದಿಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ಪ್ರಾಥಮಿಕ ತನಿಖೆ ಆಗಿದೆ, ಈ ಬಗ್ಗೆ ಮಾಹಿತಿ ಪಡೆದಿದ್ದೇನೆ: ಸಿಎಂ...

ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರವಾಗಿ ಪ್ರಾಥಮಿಕ ತನಿಖೆ ಆಗಿದೆ, ಈ ಬಗ್ಗೆ ಮಾಹಿತಿ ಪಡೆದಿದ್ದೇನೆ: ಸಿಎಂ ಬೊಮ್ಮಾಯಿ

- Advertisement -
- Advertisement -

ಮಂಗಳೂರು: ಉಡುಪಿಯಲ್ಲಿ ಡೆತ್ ನೋಟ್ ಬರೆದಿಟ್ಟು ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ‌ನೀಡಿದ್ದಾರೆ. ಸಂತೋಷ್ ಎಂಬಾತ ಉಡುಪಿ ಲಾಡ್ಜ್ ನಲ್ಲಿ ಸೂಸೈಡ್ ಮಾಡಿಕೊಂಡಿದ್ದಾರೆ. ಪ್ರಾಥಮಿಕ ತನಿಖೆ ಆಗಿದೆ ಈ ಬಗ್ಗೆ ಮಾಹಿತಿ ಪಡೆದಿದ್ದೇನೆ. ಮಂಗಳೂರಿನಿಂದ ಎಫ್ಎಸ್  ಎಲ್ ಅಧಿಕಾರಿಗಳು ಹೋಗಲು ಸೂಚಿಸಲಾಗಿದೆ. ಈ ಸಾವಿನ ಸಂಪೂರ್ಣ ತನಿಖೆ‌ ನಿಷ್ಪಕ್ಷಪಾತವಾಗಿ ಆಗಲಿದೆ. ತನಿಖೆಯ ಬಳಿಕ ಸತ್ಯ ಹೊರಬರಲಿದೆ ಅಂದರು.

ಸಿಎಂ ಪದವಿಗೆ ರಾಜೀನಾಮೆ ನೀಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಈ ಹಿಂದೆ ಸಿದ್ದರಾಮಯ್ಯ ಸರ್ಕಾರ ಇರುವಾಗ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಗ ಸಿದ್ದರಾಮಯ್ಯ ಅಧಿಕಾರ ತ್ಯಜಿಸಿದ್ದರೇ? ಆತ್ಮಹತ್ಯೆ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇವೆ. ಅಲ್ಲಿನ ತನಿಖೆ ಕಾನೂನು ಬದ್ಧ ವಾಗಿ ನಡೆಯಬೇಕೆಂದು ಸೂಚನೆ ನೀಡಿದ್ದೇನೆ. ಈಶ್ವರಪ್ಪ ಮೇಲೆ ಮಾಡಿದ ಆರೋಪವನ್ನು ಅಲ್ಲಗಳೆದಿದ್ದಾರೆ. ಅವರ ಮೇಲೆ ಕೋರ್ಟ್ ಕೇಸ್ ದಾಖಲಾಗಿತ್ತು. ಈ ಆರೋಪದ ಮಾಹಿತಿ ಸರ್ಕಾರಕ್ಕೆ ನೀಡಿಲ್ಲ. ಮುಂದೆ ಎಲ್ಲಾ ಅಂಶಗಳು ತನಿಖೆ‌ ಆಗಲಿದೆ. ಯಾವ ಸಂದರ್ಭಕ್ಕೆ ಈ ನಿರ್ಣಯ ಕೈಗೊಂಡರು ಎಂದು ತನಿಖೆಯಿಂದ ತಿಳಿಯಲಿದೆ ಅಂದರು.

- Advertisement -

Latest News

error: Content is protected !!