Thursday, June 4, 2026
Homeಕರಾವಳಿಮೂಡಬಿದರೆಯಲ್ಲಿ ಮಗುವಿನೊಂದಿಗೆ ಮಹಿಳೆ ನಾಪತ್ತೆ

ಮೂಡಬಿದರೆಯಲ್ಲಿ ಮಗುವಿನೊಂದಿಗೆ ಮಹಿಳೆ ನಾಪತ್ತೆ

- Advertisement -
- Advertisement -

ಮೂಡಬಿದರೆ: 7 ವರ್ಷದ ತನ್ನ ಮಗುವಿನೊಂದಿಗೆ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಮೂಡಬಿದರೆಯಲ್ಲಿ ನಡೆದಿದೆ. ಮಂಜುನಾಥ್ ಗೌಡ ಎಂಬವರ ಪತ್ನಿ ರಂಜಿನಿ ಕಾಣೆಯಾದವರು.

ಏಪ್ರಿಲ್ 8 ರಂದು ಮಂಜುನಾಥ್ ಗೌಡ ಪತ್ನಿಯ ಬಳಿ ಹೇಳಿ ಕೆಲಸಕ್ಕೆ ತೆರಳಿದ್ದರು. ಸಂಜೆ ಸುಮಾರು 7-30 ರ ವೇಳೆಗೆ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯ ಬೀಗ ಹಾಕಿತ್ತು. ನೋಡಿದಾಗ ಪತ್ನಿ ಹಾಗೂ ಮಗು ನಾಪತ್ತೆಯಾಗಿದ್ದಾರೆ.

ನೆರೆಹೊರೆಯವರಲ್ಲಿ ವಿಚಾರಿಸಿದಾಗಲೂ ಯಾವುದೇ ಸುಳಿವು ಸಿಗದೇ ಇದ್ದದ್ದರಿಂದ ಮೂಡಬಿದರೆ ಠಾಣೆಯಲ್ಲಿ ಮಂಜುನಾಥ್ ಗೌಡ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!