ಮುಂಬೈ : ದೀಪ ಬೆಳಗಲು ಹೇಳಿದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಶಿವಸೇನಾ ಸಂಸದ ಸಂಜಯ್ ರಾವತ್ ವಾಗ್ದಾಳಿ ನಡೆಸಿದ್ದಾರೆ. ಮೋದಿಯವರ ಮಾತನ್ನು ಪಾಲಿಸಲು ಹೋಗಿ ಜನರು ತಮ್ಮ ತಮ್ಮ ಮನೆಗಳಿಗೆ ಬೆಂಕಿ ಹೊತ್ತಿಸಿಕೊಳ್ಳದಿದ್ದರೆ ಸಾಕು ಎಂದಿದ್ದಾರೆ.
ಮಾ.22ರಂದು ಜನತಾ ಕರ್ಫ್ಯೂದಿನ ಸಂಜೆ 5ಗಂಟೆಗೆ 5 ನಿಮಿಷ ನಿಮ್ಮ ನಿಮ್ಮ ಮನೆಯ ಬಾಲ್ಕನಿಗೆ ಬಂದು ಕರೊನಾ ವಾರಿಯರ್ಸ್ಗಾಗಿ ಚಪ್ಪಾಳೆ ಹೊಡೆಯಿರಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಅವರ ಮಾತನ್ನು ಹಲವರು ತಪ್ಪಾಗಿ ಅರ್ಥೈಸಿಕೊಂಡು, ರಸ್ತೆಗಳ ಮೇಲೆ ಗುಂಪುಗುಂಪಾಗಿ ಮೆರವಣಿಗೆ ಹೋಗುತ್ತ, ಜಾಗಟೆಗಳ್ನು ಹೊಡೆದಿದ್ದರು. ಅಲ್ಲಿಗೆ ಸಾಮಾಜಿಕ ಅಂತರದ ಪರಿಕಲ್ಪನೆಯನ್ನು ಮುರಿದಿದ್ದರು.
ಅದೇ ಘಟನೆಯನ್ನು ನೆನಪಿಸಿದ ಶಿವಸೇನೆ ಸಂಸದ ಸಂಜಯ್ ರಾವತ್, ನರೇಂದ್ರ ಮೋದಿಯರು ಹಿಂದೊಮ್ಮೆ ಐದು ನಿಮಿಷ ಚಪ್ಪಾಳೆ ಹೊಡೆಲು ದೇಶದ ಜನರಿಗೆ ಹೇಳಿದ್ದರು. ಆ ಒಂದಷ್ಟು ಜನರು ರಸ್ತೆ ಮೇಲೆ ಗುಂಪುಗುಂಪಾಗಿ ಮೆರವಣಿಗೆ ಸಾಗಿ ಡ್ರಮ್ಗಳನ್ನು ಬಡಿದಿದ್ದರು. ಈಗ ದೀಪ ಬೆಳಗಲು ಕರೆಕೊಟ್ಟಿದ್ದಾರೆ. ಜನರು ತಮ್ಮ ಮನೆಗಳನ್ನು ಸುಟ್ಟುಕೊಳ್ಳದಿದ್ದರೆ ಸಾಕು ಎಂದು ಹೇಳಿದ್ದಾರೆ. ಹಾಗೇ, ಸರ್, ದೀಪವನ್ನೇನೋ ಹಚ್ಚೋಣ, ಆದರೆ ಕರೊನಾ ವೈರಸ್ನಿಂದ ಉಂಟಾಗಿರುವ ಈ ವಿಷಮ ಪರಿಸ್ಥಿತಿ ಸರಿಪಡಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂಬುದನ್ನು ನಮಗೆ ತಿಳಿಸಿ ಎಂದು ಸಂಜಯ್ ರಾವತ್ ಹೇಳಿದ್ದಾರೆ.