Saturday, December 14, 2024
Homeಕರಾವಳಿಕೊರೋನ ವಿಚಾರದಲ್ಲಿ ರಾಜಕೀಯ ಸರಿಯಲ್ಲ: ಜೆ.ಆರ್.ಲೋಬೋ

ಕೊರೋನ ವಿಚಾರದಲ್ಲಿ ರಾಜಕೀಯ ಸರಿಯಲ್ಲ: ಜೆ.ಆರ್.ಲೋಬೋ

spot_img
- Advertisement -
- Advertisement -

ಮಂಗಳೂರು: ಜಿಲ್ಲಾಡಳಿತವು ನಿರ್ಧಾರಗಳನ್ನು ರಾತ್ರೋರಾತ್ರಿ ಪ್ರಕಟಿಸುತ್ತಿರುವುದರಿಂದ ಜನರಲ್ಲಿ ಗೊಂದಲವಾಗುತ್ತಿದೆ. ಜಿಲ್ಲೆಯ ಜನರು ಆಡಳಿತಕ್ಕೆ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡುತ್ತಿದ್ದಾರೆ. ಆದರೂ ಆಡಳಿತ ಪಕ್ಷದ ಪ್ರತಿನಿಧಿಗಳ ನಡುವೆ ನಿರ್ಧಾರ ಕೈಗೊಳ್ಳುವಲ್ಲಿ ಸಹಮತವಿಲ್ಲದೆ ಗೊಂದಲ ಸೃಷ್ಟಿಯಾಗುತ್ತಿದೆ. ಜನರನ್ನು ವಿಶ್ವಾಸಕ್ಕೆ ಪಡೆದು ಯಾವುದೇ ನಿರ್ಧಾರವನ್ನು ಕನಿಷ್ಠ 24 ಗಂಟೆಗಳ ಮುಂಚಿತವಾಗಿ ಜಿಲ್ಲಾಡಳಿತ ಪ್ರಕಟಿಬೇಕು ಎಂದು ಕಾಂಗ್ರೆಸ್ ಮುಖಂಡ ಜೆ.ಆರ್. ಲೋಬೋ ಹೇಳಿದ್ದಾರೆ.

ಕೊರೋನ ಸೋಂಕು ರಾಷ್ಟ್ರೀಯ ವಿಪತ್ತು. ಈ ಸಂದರ್ಭ ಸಂಕಷ್ಟದಲ್ಲಿರುವರಿಗೆ ಸವಲತ್ತುಗಳನ್ನು ವಿತರಿಸುವಲ್ಲಿಯೇ ಗೊಂದಲ ಸೃಷ್ಟಿಯಾಗಿದೆ. ಈ ವಿಷಯದಲ್ಲಿ ರಾಜಕೀಯ ಬದಿಗಿಟ್ಟು ಕಾರ್ಯ ನಿರ್ವಹಿಸಬೇಕು ಎಂದು ಅವರು ಹೇಳಿದರು.

ಸೆಂಟ್ರಲ್ ಮಾರುಕಟ್ಟೆಯ ಹಣ್ಣು ತರಕಾರಿ ಸಗಟು ವ್ಯಾಪಾರ ಬೈಕಂಪಾಡಿಯ ಎಪಿಎಂಸಿಗೆ ಸ್ಥಳಾಂತರಿಸುವುದಕ್ಕೆ ಕಾಂಗ್ರೆಸ್‌ನಿಂದ ವಿರೋಧವಿಲ್ಲ. ಆದರೆ ಇದು ಸಕಾಲಿಕವಲ್ಲ. ಈ ಸಂದರ್ಭದಲ್ಲಿ ಸೌಲಭ್ಯಗಳು ಜನರಿಗೆ ಹತ್ತಿರದಲ್ಲಿ ಸಿಗುವಂತಾಗಬೇಕು. ಅದನ್ನು ಮತ್ತಷ್ಟು ದೂರ ಮಾಡುವುದು ಸರಿಯಲ್ಲ ಎಂದವರು ಅಭಿಪ್ರಾಯಿಸಿದರು.

ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಕ್ರಿಯಾ ಪಡೆ ರಚನೆಯಾಗಿದ್ದು, ಇದರಲ್ಲಿ ಆರೋಗ್ಯ, ಮಹಿಳಾ, ಸಾಮಾಜಿಕ ಜಾಲತಾಣ, ಪಿಂಚಣಿ, ದಾಖಲೀಕರಣ ಸೇರಿದಂತೆ ಹಲವಾರು ಸಮಿತಿಗಳು ಕಾರ್ಯ ನಿರ್ವಹಿಸಲಿವೆ. ಈ ಟಾಸ್ಕ್ ಫೋರ್ಸ್‌ನ ಕಾರ್ಯದರ್ಶಿಯಾಗಿ ಸುಬೋದ್ ಆಳ್ವ ಕಾರ್ಯ ನಿರ್ವಹಿಸಲಿದ್ದು, ಕಾಂಗ್ರೆಸ್ ಕಚೇರಿಯಲ್ಲಿ ಕಂಟ್ರೋಲ್ ರೂಂ ವ್ಯವಸ್ಥೆ ಮಾಡಲಾಗಿದೆ. ಜನರಿಗೆ ಜಿಲ್ಲಾಡಳಿತದಿಂದ ಸೌಲಭ್ಯಗಳು ತಲುಪಿಸುತ್ತಿರುವುದನ್ನು ಖಾತರಿಪಡಿಸುವುದು, ತಲುಪದಿದ್ದಾಗ ಆ ಬಗ್ಗೆ ಸಮಿತಿಯು ಟಾರ್ಸ್‌ಫೋರ್ಸ್ ಗಮನಕ್ಕೆ ತಂದು ಜಿಲ್ಲಾಡಳಿತದ ಗಮನ ಸೆಳೆಯುವ ಕಾರ್ಯವನ್ನು ಮಾಡಲಿದೆ ಎಂದು ಟಾಸ್ಕ್ ಫೋರ್ಸ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿುವ ಜೆ.ಆರ್. ಲೋಬೋ ತಿಳಿಸಿದರು.

- Advertisement -
spot_img

Latest News

error: Content is protected !!