Sunday, May 5, 2024
Homeಕರಾವಳಿಉಡುಪಿಮಲ್ಪೆ ಕಡಲ ತೀರದಲ್ಲಿ ಪತ್ತೆಯಾದ ಸಲೋಪೆನ್ಟ್ ಟ್ಯೂಬ್ ವರ್ಮ್

ಮಲ್ಪೆ ಕಡಲ ತೀರದಲ್ಲಿ ಪತ್ತೆಯಾದ ಸಲೋಪೆನ್ಟ್ ಟ್ಯೂಬ್ ವರ್ಮ್

spot_img
- Advertisement -
- Advertisement -

ಉಡುಪಿ: ಮಲ್ಪೆ ಸಮುದ್ರ ತೀರದಲ್ಲಿ ಕಾಣಿಸಿಕೊಂಡ ಶ್ಯಾವಿಗೆ ರೂಪದ ಪಾಚಿ ಸಲೋಪೆನ್ಟ್ ಟ್ಯೂಬ್ ವರ್ಮ್ ಎಂದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.‌ಮೀನುಗಾರಿಕಾ ಮಹಾವಿದ್ಯಾಲಯದ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಸಂಶೋಧನೆಗಾಗಿ ಪಾಚಿಯ ಸ್ಯಾಂಪಲ್ ಸಂಗ್ರಹಿಸಲಾಗಿದೆ.

ಕಳೆದ ಎರಡು ದಿನಗಳಲ್ಲಿ ಮಲ್ಪೆ ಸಮುದ್ರ ತೀರದಲ್ಲಿ ಶ್ಯಾವಿಗೆ ಮಾದರಿಯ ವಿಚಿತ್ರ ವಸ್ತುಗಳು ಕಾಣಿಸಿಕೊಂಡಿದ್ದು, ಮೀನುಗಾರಿಕಾ ಮಹಾ ವಿದ್ಯಾಲಯದ ಪ್ರಾಧ್ಯಾಪಕ ಶಿವಕುಮಾರ್ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ.

ಕಿಲೋಮೀಟರ್ ಗಟ್ಟಲೆ ಪಾಚಿ ಅಗಾಧವಾಗಿ ಕಂಡುಬಂದಿದ್ದು, ಮೂರ್ನಾಲ್ಕು ವರ್ಷಗಳ ಹಿಂದೆ ಪಣಂಬೂರು ಬೀಚ್ ನಲ್ಲಿ ಈ ರೀತಿಯ ಜೀವಿ ಪತ್ತೆಯಾಗಿತ್ತು ಎಂದು ಹೇಳಲಾಗಿದೆ.

ಬಿಪರ್ ಜಾಯ್ ಚಂಡಮಾರುತದ ಪ್ರಭಾವದಿಂದಾಗಿ ಸಮುದ್ರದಲ್ಲಿ ಉಪ್ಪಿನ ಅಂಶ ಕಡಿಮೆಯಾದ ಹಿನ್ನೆಲೆಯಲ್ಲಿ ಈ ಜೀವಿ ಸತ್ತು ರಾಶಿಯಾಗಿ ತೇಲಿ ಸಮುದ್ರ ತೀರಕ್ಕೆ ಬಂದಿದ್ದು ಯಾರೂ ಭೀತಿಗೊಳಗಾಗಬೇಕಾದ ಅವಶ್ಯಕತೆ ಇಲ್ಲ ಎಂದು ಸಂಶೋಧಕರು ಮಾಹಿತಿ ನೀಡಿದ್ದಾರೆ.

- Advertisement -
spot_img

Latest News

error: Content is protected !!