- Advertisement -
- Advertisement -
ಕರ್ನಾಟಕ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ಅಮೆಜಾನ್, ಸ್ವಿಗ್ಗಿ ಇನ್ಸ್ಟಾಮಾರ್ಟ್ ಹಾಗೂ ಬಿಗ್ಬಾಸ್ಕೆಟ್ ಸಂಸ್ಥೆಗಳ ಆಹಾರ ಪರವಾನಗಿಯನ್ನು ಅಮಾನತುಗೊಳಿಸಿ ಕಠಿಣ ಆದೇಶ ಹೊರಡಿಸಿದೆ.
ಈ ಆನ್ಲೈನ್ ತ್ವರಿತ ವಾಣಿಜ್ಯ ಪ್ಲಾಟ್ಫಾರ್ಮ್ಗಳಲ್ಲಿ ಅತ್ಯಂತ ವಿಷಕಾರಿಯಾದ ಧತ್ತೂರ ಹಣ್ಣು ಮತ್ತು ಬೀಜಗಳನ್ನು FSSAI ಲೇಬಲ್ನೊಂದಿಗೆ ಮಾನವ ಬಳಕೆಯ ಆಹಾರ ಪದಾರ್ಥವೆಂದು ತೋರಿಸಿ ಮಾರಾಟ ಮಾಡುತ್ತಿದ್ದುದು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಇಲಾಖೆಯು ಇ-ಕಾಮರ್ಸ್ ಸಂಸ್ಥೆಗಳ ವಿರುದ್ಧ ಸಮರ ಸಾರಿದೆ.
ಸಾರ್ವಜನಿಕರ ಆರೋಗ್ಯ ಭದ್ರತೆಯ ಹಿತದೃಷ್ಟಿಯಿಂದ ಈ ಸಂಸ್ಥೆಗಳು ತಮ್ಮ ಆಪ್ಗಳಲ್ಲಿ ಧತ್ತೂರ ಹಣ್ಣು ಹಾಗೂ ಬೀಜಗಳ ಪ್ರದರ್ಶನ, ಜಾಹೀರಾತು ಮತ್ತು ವಿತರಣೆಯನ್ನು ತಕ್ಷಣವೇ ಸಂಪೂರ್ಣವಾಗಿ ಬಂದ್ ಮಾಡುವಂತೆ ಫುಡ್ ಸೇಫ್ಟಿ ಇಲಾಖೆಯು ಖಡಕ್ ಸೂಚನೆ ನೀಡಿದೆ.
- Advertisement -


