Saturday, May 4, 2024
Homeತಾಜಾ ಸುದ್ದಿಮಸೀದಿಯಲ್ಲಿ ಹೋಮ ಮಾಡುತ್ತೇವೆಂದು ವಿವಾದಾತ್ಮಕ ಹೇಳಿಕೆ ನೀಡಿದ ವಿಹೆಚ್ಪಿ ನಾಯಕಿ

ಮಸೀದಿಯಲ್ಲಿ ಹೋಮ ಮಾಡುತ್ತೇವೆಂದು ವಿವಾದಾತ್ಮಕ ಹೇಳಿಕೆ ನೀಡಿದ ವಿಹೆಚ್ಪಿ ನಾಯಕಿ

spot_img
- Advertisement -
- Advertisement -

ಲಖನೌ: ಮುಸ್ಲಿಂ ಧರ್ಮದವರು ಹಿಂದೂ ದೇವಾಲಯದಲ್ಲಿ ನಮಾಜ್​ ಮಾಡಿ, ಪೊಲೀಸ್​ ಪ್ರಕರಣ ದಾಖಲಾದ ಬೆನ್ನಲ್ಲೇ, ಮಸೀದಿಗಳಲ್ಲಿ ಹೋಮ ಮಾಡುವುದಾಗಿ ವಿಶ್ವ ಹಿಂದೂ ಪರಿಷತ್​ನ ನಾಯಕಿಯೊಬ್ಬರು ಹೇಳಿದ್ದಾರೆ. ನಾಯಕಿಯ ಈ ಹೇಳಿಕೆ ಭಾರಿ ಪ್ರಮಾಣದ ವಿವಾದಕ್ಕೆ ಕಾರಣವಾದ ನಂತರ ಅವರು ಹೇಳಿಕೆ ಹಿಂಪಡೆದಿದ್ದಾರೆ ಎನ್ನಲಾಗಿದೆ.

‘ಮುಸಲ್ಮಾನರು ಸಾಮಾಜಿಕ ಸಮನ್ವಯದ ಹೆಸರಿನಲ್ಲಿ ಹಿಂದೂ ದೇವಾಲಯಗಳಿಗೆ ಬಂದು ನಮಾಜ್​ ಮಾಡುತ್ತಾರೆ. ನಾವು ಹಿಂದೂಗಳೂ ಕೂಡ ಅದೇ ರೀತಿಯಲ್ಲಿ ಮಸೀದಿಗಳಿಗೆ ತೆರಳಿ ಹೋಮ ಹವನ ಮಾಡಬೇಕು. ನಾನು ಲಖನೌನ ಪುರಾತನ ಮಸೀದಿಯಲ್ಲಿ ಹೋಮ ಮಾಡುತ್ತೇನೆ’ ಎಂದು ಪರಿಷತ್ತಿನ ನಾಯಕಿ ಸಾಧ್ವಿ ಪ್ರಾಚಿ ನಿನ್ನೆ ಹೇಳಿದ್ದರು. ತಮ್ಮ ಜತೆಗೆ ಹೋಮ ನಡೆಸಲು ಬಿಜೆಪಿ ಮತ್ತು ಬೇರೆ ಸಂಘಟನೆಗಳ ನಾಯಕರಿಗೂ ಕರೆ ನೀಡಿದ್ದಾರೆ. ಲವ್​ ಜಿಹಾದ್​ ಮೂಲಕ ಹಿಂದೂ ಯುವತಿರನ್ನು ಬಲಿ ತೆಗೆದುಕೊಳ್ಳುವ ಮುಸ್ಲಿಂ ಯುವಕರನ್ನು ನೇರವಾಗಿ ನೇಣಿಗೆ ಏರಿಸಬೇಕೆಂದೂ ಅವರು ಹೇಳಿದ್ದಾರೆ.

ಪ್ರಾಚಿಯವರು ಈ ರೀತಿ ಹೇಳಿರುವುದಕ್ಕೆ ಅನೇಕರು ಆಕ್ರೋಶ ವ್ಯಕಪಡಿಸಿದ್ದರು. ಅದರ ಬೆನ್ನಲ್ಲೇ ಪ್ರಾಚಿ ಅವರು ಹೇಳಿಕೆಯನ್ನು ವಾಪಾಸು ಪಡೆದಿದ್ದಾರೆ ಎನ್ನಲಾಗಿದೆ. ಈ ತಿಂಗಳ ಆರಂಭದಲ್ಲಿ ಮಥುರಾದ ನಂದಗಾಂವ್​ನ ನಂದ್​ ಬಾಬಾ ಮಂದಿರದಲ್ಲಿ ಇಬ್ಬರು ಮುಸ್ಲಿಂ ಯುವಕರು ನಮಾಜ್​ ಮಾಡಿದ್ದರು. ಆ ಸಂಬಂಧ ಫೈಜಲ್​ ಖಾನ್​, ಚಂದ್​ ಮೊಹಮ್ಮದ್​ ವಿರುದ್ಧ ಮಥುರಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಿಗೆ ಸಹಕಾರ ನೀಡಿದ ಅಲೋಕ್​ ರತನ್​ ಮತ್ತು ನೀಲೇಶ್​ ಗುಪ್ತಾ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಘಟನೆಯ ಬೆನ್ನಲ್ಲೇ ಹಿಂದೂ ಯುವಕರು, ಮಸೀದಿಯಲ್ಲಿ ಹನುಮಾನ್​ ಚಾಲಿಸಾ ಪಠಿಸಿದ್ದು, ಮೂವರು ಯುವಕರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

- Advertisement -
spot_img

Latest News

error: Content is protected !!