Saturday, June 6, 2026
Homeತಾಜಾ ಸುದ್ದಿಅಮವಾಸ್ಯೆ ಹಿಂದಿನ ದಿನ ಪೊಲೀಸ್ ಠಾಣೆ ಬಾಗಿಲಿನಲ್ಲಿ ಕೋಳಿ ಬಲಿ: ವೈರಲ್ ಆದ ಕೋಳಿ ಬಲಿ...

ಅಮವಾಸ್ಯೆ ಹಿಂದಿನ ದಿನ ಪೊಲೀಸ್ ಠಾಣೆ ಬಾಗಿಲಿನಲ್ಲಿ ಕೋಳಿ ಬಲಿ: ವೈರಲ್ ಆದ ಕೋಳಿ ಬಲಿ ವೀಡಿಯೋ

- Advertisement -
- Advertisement -

ಹಾಸನ : ಪೊಲೀಸ್ ಠಾಣೆ ಎದುರು ಕೋಳಿ ಬಲಿಕೊಟ್ಟು ವಿಚಿತ್ರ ಆಚರಣೆ ಮಾಡಿರುವ ಘಟನೆ ಅರಸೀಕೆರೆಯಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ಬಾಗಿಲಿಗೆ ಕೋಳಿ ಬಲಿ ನೀಡಲಾಗಿದ್ದು, ಕೋಳಿ ಕುಯ್ದು ರಕ್ತವನ್ನು ಪೊಲೀಸ್ ಠಾಣೆಯ ಎರಡು ಗೋಡೆಗಳಿಗೆ ವ್ಯಕ್ತಿಗಳು ಹಚ್ಚಿದ್ದಾರೆ.

ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆ ಎದುರು ನಡೆದಿರುವ ಈ ಘಟನೆ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಅಮವಾಸ್ಯೆಯ ಹಿಂದಿನ ದಿನ ಕೋಳಿ ಬಲಿ ಕೊಡಲಾಗಿದ್ದು, ಪೊಲೀಸ್ ಠಾಣೆ ಎದುರಿನ ಕೋಳಿ ಬಲಿ ವೀಡಿಯೋ ವೈರಲ್ ಆಗಿದೆ.

- Advertisement -

Latest News

error: Content is protected !!