- Advertisement -
- Advertisement -
ಮಾಸ್ಕೋ: ಮಹಾಮಾರಿ ಕೊರೊನ ಸಧ್ಯದ ಪರಿಸ್ಥಿತಿಯಲ್ಲಿ ಯಾರನ್ನು ಕಾಡುವುದು ಎಂದು ಯೋಚಿಸಲು ಕೂಡ ಅಸಾಧ್ಯ ,ಬ್ರಿಟನ್ ಪ್ರಧಾನಿಯ ನಂತರ ಈಗಿನ ಸರಣಿ ರಷ್ಯಾ ಪ್ರಧಾನಿ ,ರಷ್ಯಾ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಅವರಿಗೆ ಕೋವಿಡ್ 19 ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಸೋಂಕಿಗೆ ಒಳಗಾದ ರಷ್ಯಾದ ಮೊದಲ ಅತ್ಯುನ್ನತ ಶ್ರೇಣಿಯ ಅಧಿಕಾರಿಯಾಗಿದ್ದಾರೆ ಮಾಧ‍್ಯಮ ವರದಿ ಮಾಡಿದೆ.
ಇದರ ಬೆನ್ನಲ್ಲೇ ಮಿಖಾಯಿಲ್ ಮಿಶಸ್ಟಿನ್, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ವೀಡಿಯೊ ಕರೆ ಮಾಡಿ ಸ್ವಯಂ-ಪ್ರತ್ಯೇಕವಾಗುವುದಾಗಿ ತಿಳಿಸಿದ್ದಾರೆ. 54 ವರ್ಷದ ಮಿಖಾಯಿಲ್ ಜನವರಿಯಲ್ಲಿ ಪ್ರಧಾನಿ ಹುದ್ದೆ ಅಲಂಕರಿಸಿದ್ದರು. ಇದೀಗ ಉಪ ಪ್ರಧಾನಿ ಮಂತ್ರಿ ಆಂಡ್ರೇ ಬೆಲೌಸೊವ್ ತಾತ್ಕಾಲಿಕವಾಗಿ ಮಿಶುಸ್ಟಿನ್ ಅವರ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ.
- Advertisement -