ಜೈಪುರ್ :ಜಗತ್ತೇ ಕೊರೊನದಿಂದ ತತ್ತರಿಸಿ ಹೋಗಿರುವ ಆ ಸಂದಿಗ್ದ ಪರಿಸ್ಥಿಯಲ್ಲಿ, ರಾಜಸ್ಥಾನದ ಶಾಸಕ ಭರತ್ ಸಿಂಗ್ ಅವರು ರಾಜಸ್ಥಾನದಲ್ಲಿ ಮದ್ಯದಂಗಡಿ ತೆರೆಯಲು ಅನುಮತಿ ನೀಡಬೇಕು ಎಂದು ಸಿಎಂ ಅಶೋಕ್ ಗೆಹ್ಲೋಟ್ ಗೆ ಪತ್ರ ಬರೆದಿದ್ದು, ಮದ್ಯ ಸೇವನೆಯಿಂದ ಗಂಟಲಿನಲ್ಲಿರುವ ಕೊರೊನಾ ವೈರಸ್ ಸತ್ತು ಹೋಗುತ್ತದೆ ಎಂದು ಹೇಳಿದ್ದಾರೆ.
ಜಗತ್ತಿನಾದ್ಯಂತ ಭೀತಿ ಹುಟ್ಟಿಸಿರುವ ಕೋವಿಡ್ 19 ಗೆ ಔಷಧಿ ಕಂಡು ಹಿಡಿಯಲು ವಿಶ್ವದಾದ್ಯಂತ ಅನೇಕ ದೇಶಗಳ ವಿಜ್ಞಾನಿಗಳು, ಸಂಶೋಧಕರು ಹಗಲು ರಾತ್ರಿ ಎನ್ನದೇ ಶ್ರಮಿಸುತ್ತಿದ್ದಾರೆ. ಈ ನಡುವೆ ರಾಜಸ್ಥಾನದ ಶಾಸಕ ಭರತ್ ಸಿಂಗ್ ಅವರು ಕೊರೊನಾಗೆ ಮದ್ಯವೇ ಮದ್ದು ಎಂದು ಹೇಳಿದ್ದಾರೆ.
ಅಲ್ಕೋಹಾಲ್ ಮಿಶ್ರಿತ ಹ್ಯಾಂಡ್ ಸ್ಯಾನಿಟೈಸರ್ ಬಳಕೆಯಿಂದ ಕೈಯಲ್ಲಿರುವ ಮಾರಕ ಕೊರೊನಾ ವೈರಸ್ ಸಾಯುತ್ತದೆ. ಅದೇ ರೀತಿ ಮದ್ಯಸೇವನೆಯಿಂದ ಗಂಟಲಿನಲ್ಲಿರುವ ಕೊರೊನಾ ವೈರಸ್ ಸತ್ತುಹೋಗುತ್ತದೆ ಹೀಗಾಗಿ ಮದ್ಯ ಮಾರಾಟಕ್ಕೆ ಅವಕಾಶ ಕೊಡಿ ಎಂದು ಸಿಎಂಗೆ ಪತ್ರ ಬರೆದಿದ್ದಾರೆ.ಶಾಸಕರ ಈ ನಡೆ ಜನತೆಯನ್ನು ನಗೆಪಾಟೀಲಿಗೆ ಈಡು ಮಾಡಿದೆ.
ಮದ್ಯ ಸೇವಿಸಿದ್ರೆ ಗಂಟಲಿನಲ್ಲಿರುವ ಕೊರೊನಾ ವೈರಸ್ ಸಾಯುತ್ತೆ : ಸಿಎಂಗೆ ಪತ್ರ ಬರೆದ ಶಾಸಕ
- Advertisement -
- Advertisement -
- Advertisement -
