ನವದೆಹಲಿ : ಆರೋಗ್ಯ ಸೇತು ಆಪ್ ಅನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಈಗಾಗಲೇ ಕೇಂದ್ರ ಸರ್ಕಾರ ತನ್ನ ಸಿಬ್ಬಂದಿಗಳಿಗೆ ಸೂಚನೆ ನೀಡಿದೆ. ಹೊಸ ಮೊಬೈಲ್ ಗಳಲ್ಲಿ ಆರೋಗ್ಯ ಸೇತು ಆಪ್ ಕಡ್ಡಾಯವಾಗಿ ಅಳವಡಿಸುವಂತೆ ಮೊಬೈಲ್ ತಯಾರಿಕಾ ಕಂಪನಿಗಳಿಗೆ ನಿಯಮ ರೂಪಿಸಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ ಎಂದು ಹೇಳಲಾಗಿದೆ.
ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅವುಗಳಲ್ಲಿ ಆರೋಗ್ಯ ಸೇತು ಆಪ್ ಬಳಕೆ ಕೂಡ ಒಂದಾಗಿದೆ.
ಭಾರತ ದೇಶದಲ್ಲಿ ಕೋವಿಡ್ 19 ಲಾಕ್ ಡೌನ್ ಜಾರಿಯಾದ ನಂತರ ದೇಶದಲ್ಲಿ ಮಾರಾಟವಾಗುವ ಮೊಬೈಲ್ ಗಳಲ್ಲಿ ಮೊಬೈಲ್ ತಯಾರಕರು ಆರೋಗ್ಯ ಸೇತು ಆಪ್ ಅಳವಡಿಸಬೇಕು ಈ ಆಪ್ ಅನ್ನು ನೋಂದಣಿ ಮಾಡಿದ ನಂತರವೇ ಮೊಬೈಲ್ ಬಳಕೆ ಮಾಡುವ ರೀತಿ ಸಂಯೋಜನೆಗೊಳಿಸಬೇಕು. ನೋಂದಣಿ ವೇಳೆಯಲ್ಲಿ ಸ್ಕಿಪ್ ಆಯ್ಕೆ ನೀಡಬಾರದು ಎಂದು ನಿಯಮ ರೂಪಿಸಲಾಗುತ್ತಿದೆ. ಈಗಾಗಲೇ ಸುಮಾರು 5 ಕೋಟಿಗೂ ಹೆಚ್ಚು ಮಂದಿ ಆರೋಗ್ಯ ಸೇತು ಆಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ ಎಂದು ಕೆಲವ್ ಮೂಲಗಳಿಂದ ತಿಳಿದು ಬಂದಿದೆ .
ಹೊಸ ಮೊಬೈಲಿಗೆ ಅರೋಗ್ಯ ಸೇತು ಆಪ್ ಕಡ್ಡಾಯ : ಕೇಂದ್ರ ಸರಕಾರ
- Advertisement -
- Advertisement -
- Advertisement -