Saturday, October 17, 2026
Homeತಾಜಾ ಸುದ್ದಿಕೇರಳದ ಪಾಲಕ್ಕಾಡ್‌ ನಲ್ಲಿ ಆರ್‌ ಎಸ್‌ ಎಸ್‌ ಮುಖಂಡನ ಹತ್ಯೆ: ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಐದು...

ಕೇರಳದ ಪಾಲಕ್ಕಾಡ್‌ ನಲ್ಲಿ ಆರ್‌ ಎಸ್‌ ಎಸ್‌ ಮುಖಂಡನ ಹತ್ಯೆ: ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ ಐದು ಮಂದಿ ದುಷ್ಕರ್ಮಿಗಳು

- Advertisement -
- Advertisement -

ಪಾಲಕ್ಕಾಡ್:‌ ಕೇರಳದ ಪಾಲಕ್ಕಾಡ್‌ ನಲ್ಲಿ ಆರೆಸ್ಸೆಸ್‌ ನ ಮುಖಂಡರೊಬ್ಬರನ್ನ ಹತ್ಯೆಗೈದ ಘಟನೆ ಇಂದು ನಡೆದಿದೆ. ಕೊಲೆಗೀಡಾದ ವ್ಯಕ್ತಿಯನ್ನು ಶ್ರೀನಿವಾಸ್‌ ಎಂದು ಗುರುತಿಸಲಾಗಿದೆ.

ಬೈಕ್‌ ನಲ್ಲಿ ಬಂದ ಐದು ಮಂದಿ ಅಪರಿಚಿತರ ತಂಡ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ಶ್ರೀನಿವಾಸನ್‌ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ನಿನ್ನೆ ಪಾಲಕ್ಕಾಡ್‌ ನಲ್ಲಿ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾದ ಮುಖಂಡ ಝಬೈರ್‌ ಎಂಬುವರ ಹತ್ಯೆ ನಡೆದಿತ್ತು.

- Advertisement -

Latest News

error: Content is protected !!