Wednesday, June 24, 2026
Homeಕರಾವಳಿಮಂಗಳೂರುಬೆಳ್ತಂಗಡಿ : ರೌಡಿಶೀಟರ್ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಭವಿಷ್ಯ ಇಂದು ಹೈ ಕೋರ್ಟ್ ನಲ್ಲಿ...

ಬೆಳ್ತಂಗಡಿ : ರೌಡಿಶೀಟರ್ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಭವಿಷ್ಯ ಇಂದು ಹೈ ಕೋರ್ಟ್ ನಲ್ಲಿ ನಿರ್ಧಾರ

- Advertisement -
- Advertisement -

ಬೆಳ್ತಂಗಡಿ : ಉಜಿರೆ ಗ್ರಾಮದ ನಿವಾಸಿ  ಹಲವಾರು ಪ್ರಕರಣ ಹೊಂದಿರುವ ರೌಡಿಶೀಟರ್ ಮಹೇಶ್ ಶೆಟ್ಟಿ ತಿಮರೋಡಿಯನ್ನು ಒಂದು ವರ್ಷಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಪುತ್ತೂರು ಎ.ಸಿ.ಸ್ಟೆಲ್ಲಾ ವರ್ಗಿಸ್ ಸೆ.18 ರಂದು (18-09-2025 ರಿಂದ 17-09-2026 ರವೆಗೆ) ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು.

ಈ ಆದೇಶದ ವಿರುದ್ಧ ತಿಮರೋಡಿ ವಕೀಲರ ಮೂಲಕ ದಕ್ಷಿಣ ಕನ್ನಡ ಜಿಲ್ಲಾ ಕೋರ್ಟ್ ಗೆ ಮೊರೆ ಹೋಗಿದ್ದರು. ಆದ್ರೆ ಅ.9 ರಂದು ಜಿಲ್ಲಾ ಕೋರ್ಟ್ ನಲ್ಲಿ ಅರ್ಜಿ ವಜಾಗೊಳಿಸಿತ್ತು. ಇದರ ಬೆನ್ನಲ್ಲೇ ಹೈಕೋರ್ಟ್ ನಲ್ಲಿ ಸೆ.29 ರಂದು ಪ್ರಕರಣ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಅ.13 ರಂದು ವಿಚಾರಣೆ ನಡೆಸಿ ತಿಮರೋಡಿ ಮೇಲೆ ಮುಂದಿನ ಆದೇಶದವರೆಗೆ ಬಲವಂತದ ಕ್ರಮ ಬೇಡ ಎಂದು ಸೂಚನೆ ನೀಡಿ ಗಡಿಪಾರು ಪ್ರಕರಣದ ಆದೇಶವನ್ನು ಕಾಯ್ದಿರಿಸಿತ್ತು.

ರೌಡಿಶೀಟರ್ ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಪ್ರಕರಣದ ಆದೇಶದ ಭವಿಷ್ಯ ನ.17 ರಂದು(ಇಂದು) ಹೈ ಕೋರ್ಟ್ ನಲ್ಲಿ ಹೊರಬಿಳಲಿದೆ.

- Advertisement -

Latest News

error: Content is protected !!