Thursday, June 4, 2026
Homeಕರಾವಳಿಬಂಟ್ವಾಳದಲ್ಲಿ  ಮಡಂತ್ಯಾರು ನಿವಾಸಿ ರೋಶನ್‌ ಸೆರಾವೊ ಅಪಘಾತವಾಗಿ ಸಾವು ಪ್ರಕರಣ: ಅಪಘಾತವಾದಾಗ ಕಾರಿನ ದಾಖಲೆ ಪತ್ರ...

ಬಂಟ್ವಾಳದಲ್ಲಿ  ಮಡಂತ್ಯಾರು ನಿವಾಸಿ ರೋಶನ್‌ ಸೆರಾವೊ ಅಪಘಾತವಾಗಿ ಸಾವು ಪ್ರಕರಣ: ಅಪಘಾತವಾದಾಗ ಕಾರಿನ ದಾಖಲೆ ಪತ್ರ ಹಾಗೂ ನಗದು ನಾಪತ್ತೆ ಆರೋಪ

- Advertisement -
- Advertisement -

ಬಂಟ್ವಾಳ: ಇಲ್ಲಿನ ಚಂಡ್ತಿಮಾರ್‌ ಎಂಬಲ್ಲಿ  ಎರಡು ದಿನಗಳ‌ ಹಿಂದೆ ನಡೆದ ಕಾರು ಮತ್ತು ಟ್ಯಾಂಕರ್‌ ನಡುವಿನ ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಇದೀಗ‌ ಮತ್ತೊಂದು ಕೇಸ್ ದಾಖಲಾಗಿದೆ.

ಕಾರಿನ ಮಾಲೀಕ ಮಡಂತ್ಯಾರು ನಿವಾಸಿ ರೋಶನ್‌ ಸೆರಾವೊ ಕ್ಯಾಟರಿಂಗ್ ಉದ್ಯಮಿಯಾಗಿದ್ದು, ಮಂಗಳೂರಿನಲ್ಲಿ ಅಪಘಾತದ ಮೊದಲ ದಿನ ನಡೆದ ಕಾರ್ಯಕ್ರಮದ ಹಣವನ್ನು ಪಡೆದು ಮಡಂತ್ಯಾರಿಗೆ ತೆರಳುತ್ತಿದ್ದಾಗ ಅಪಘಾತವಾಗಿತ್ತು. ಈ ವೇಳೆ ಸುಮಾರು 2 ಲಕ್ಷ ರೂ. ನಗದು ಹಾಗೂ ಕಾರಿನ ದಾಖಲೆ ಪತ್ರಗಳು ಅವರ ಬಳಿ ಇತ್ತು.ಆದರೆ ಇದೀಗ ದಾಖಲೆ ಹಾಗೂ ನಗದು ಕಾಣೆಯಾಗಿರುವುದು ತಿಳಿದು ಬಂದಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಗೆ ದೂರು ನೀಡಲಾಗಿದೆ.

ಘಟನೆಯಲ್ಲಿ ಕಾರಿನ ಮಾಲೀಕ ಮಡಂತ್ಯಾರು ನಿವಾಸಿ ರೋಶನ್‌ ಸೆರಾವೊ ಸಾವನ್ನಪ್ಪಿದ್ದರು.
ಈ ಅಪಘಾತದ ದೃಶ್ಯ ಹೆದ್ದಾರಿಯ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ವೈರಲ್‌ ಆಗಿದೆ. ಈ ವೇಳೆ ಕಾರಿನಲ್ಲಿದ್ದ ನಗದಿನ ಕಟ್ಟು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಆದರೆ ಆ ಬಳಿಕ ಅದು ನಾಪತ್ತೆಯಾಗಿತ್ತು.

- Advertisement -

Latest News

error: Content is protected !!