Thursday, June 4, 2026
Homeಚಿಕ್ಕಮಗಳೂರುಚಿಕ್ಕಮಗಳೂರು; ಮಂಗಳೂರಿನ ನಾಲ್ವರು ಯುವಕರಿಂದ ಮೂಡಿಗೆರೆಯಲ್ಲಿ ದರೋಡೆ

ಚಿಕ್ಕಮಗಳೂರು; ಮಂಗಳೂರಿನ ನಾಲ್ವರು ಯುವಕರಿಂದ ಮೂಡಿಗೆರೆಯಲ್ಲಿ ದರೋಡೆ

- Advertisement -
- Advertisement -

ಚಿಕ್ಕಮಗಳೂರು;  ಮನೆಯಲ್ಲಿದ್ದವರಿಗೆ ಖಾರದ ಪುಡಿ ಎರಚಿ ಮಂಗಳೂರ ಮೂಲದ ನಾಲ್ವರು ಯುವಕರು ದರೋಡೆ ನಡೆಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಾಳಿಗನಾಡು ಹೆಬ್ಬಾರಟ್ಟಿ ಗ್ರಾಮದಲ್ಲಿ ನಡೆದಿದೆ.

ಹೆಬ್ಬಾರಟ್ಟಿ ಅನಂತ ಹೆಬ್ಬಾರ್ ಎಂಬುವರ ಮನೆಗೆ ನಿನ್ನೆ ರಾತ್ರಿ 8 ಗಂಟೆಗೆ ನುಗ್ಗಿದ ದರೋಡೆಕೋರರು ಮನೆ ಮಂದಿಗೆ ಖಾರದ ಪುಡಿ ಎರಚಿ ದರೋಡೆ ಮಾಡಿದ್ದಾರೆ.5 ಲಕ್ಷ ನಗದು, 30 ಗ್ರಾಂ ತೂಕದ ಮಾಂಗಲ್ಯ ಸರವನ್ನ ಕದ್ದೊಯ್ದಿದ್ದಾರೆ.

ಮನೆಗೆ ನುಗ್ಗಿದ ನಾಲ್ವರ ದರೋಡೆಕೋರರ ತಂಡ ಮನೆ ಮಾಲೀಕ ಅನಂತ್ ಹೆಬ್ಬಾರ್ ಅವರ ಕುತ್ತಿಗೆಗೆ ಲಾಂಗ್ ಇಟ್ಟು ಬೆದರಿಸಿದೆ. ಈ ವೇಳೆ ಅವರನ್ನು ಬಿಡಿಸಲು ಬಂದ ಕಾರ್ಮಿಕ ಮಾಣಿ ಭಟ್ಟ ಎಂಬುವರ ಕೈ ಕಡಿದಿದ್ದಾರೆ. ಮನೆಯವರು ಕೂಗಿಕೊಳ್ಳುತ್ತಿದ್ದಂತೆ ಅಕ್ಕಪಕ್ಕದ ಜನ ಸೇರುತ್ತಿದ್ದಾರೆ. ಈ ವೇಳೆ ಮೂವರು ಕಾರಿನಲ್ಲಿ ಎಸ್ಕೇಪ್ ಆಗಿದ್ದಾರೆ.ಒಬ್ಬಾತ ಅರಮನೆ ತಲಗೂರು ಎಂಬ ಗ್ರಾಮದಲ್ಲಿ ಅರಣ್ಯದಲ್ಲಿ ಅವಿತು ಕೂತಿದ್ದ. ಆತನನ್ನು ಸ್ಥಳೀಯರು ಸೆರೆ ಹಿಡಿದಿದ್ದಾರೆ.

ಸ್ಥಳಕ್ಕೆ ಬಾಳೂರು ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.ಬಾಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!