Monday, May 13, 2024
Homeಅಪರಾಧವೇಶ್ಯಾವಾಟಿಕೆಗಾಗಿ ದ್ವಿಚಕ್ರವಾಹನ ಮತ್ತು ಸರ ಕಳವು ಮಾಡುತ್ತಿದ್ದ ಕಳ್ಳರ ಸೆರೆ; 7.20 ಲಕ್ಷ ರೂ. ಮೌಲ್ಯದ...

ವೇಶ್ಯಾವಾಟಿಕೆಗಾಗಿ ದ್ವಿಚಕ್ರವಾಹನ ಮತ್ತು ಸರ ಕಳವು ಮಾಡುತ್ತಿದ್ದ ಕಳ್ಳರ ಸೆರೆ; 7.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ

spot_img
- Advertisement -
- Advertisement -

ಬೆಂಗಳೂರು: ವೇಶ್ಯಾವಾಟಿಕೆಗಾಗಿ ದ್ವಿಚಕ್ರವಾಹನ ಮತ್ತು ಸರ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.


ಚನ್ನರಾಯಪಟ್ಟಣದ ರಮೇಶ್ ಅಲಿಯಾಸ್ ಜಾಕಿ (30), ಮಾಗಡಿ -ರಸ್ತೆ ಮಾಚೋಹಳ್ಳಿಯ ಲೋಕೇಶ್ ಅಲಿಯಾಸ್ ಕಮಾಯಿ (24) ಹಾಗೂ ಅಂಚೆಪಾಳ್ಯದ ಮೊಹಮ್ಮದ್ ಮದಾರ್ಸಿ(23) ಬಂಧಿಸಲಾಗಿದೆ.


ಆರೋಪಿಗಳಿಂದ 7.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, 2 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಆರೋಪಿಗಳು ಅನಾರೋಗ್ಯ ಪೀಡಿತ ಮಹಿಳೆಯೊಬ್ಬರ ಸರ ಕದ್ದು ಪರಾರಿಯಾಗಿದ್ದರು. ಈ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ.


ರಮೇಶ ಸುಬ್ರಹ್ಮಣ್ಯಪುರ ಠಾಣೆ ರೌಡಿಶೀಟರ್ ಆಗಿದ್ದಾನೆ. ಈತನ ಬಂಧನದಿಂದ 13 ಪ್ರಕರಣಗಳು ಪತ್ತೆಯಾಗಿವೆ. ಸುಬ್ರಹ್ಮಣ್ಯನಗರ ಠಾಣೆ ವ್ಯಾಪ್ತಿಯಲ್ಲಿ ಸುಶಾಂತ್ ಅಲಿಯಾಸ್ ಎಂಬುವರ ಕೊಲೆ ಪ್ರಕರಣದಲ್ಲಿ ಈತ ಆರೋಪಿಯಾಗಿದ್ದು, ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ.

- Advertisement -
spot_img

Latest News

error: Content is protected !!