Thursday, June 4, 2026
HomeUncategorizedವಿಮಾನದಲ್ಲಿ ಸಿಬ್ಬಂದಿಯ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಪೂಜಾ ಹೆಗ್ಡೆ: ಕ್ಷಮೆ ಕೇಳಿದ ಇಂಡಿಗೋ ಸಂಸ್ಥೆ

ವಿಮಾನದಲ್ಲಿ ಸಿಬ್ಬಂದಿಯ ವರ್ತನೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಪೂಜಾ ಹೆಗ್ಡೆ: ಕ್ಷಮೆ ಕೇಳಿದ ಇಂಡಿಗೋ ಸಂಸ್ಥೆ

- Advertisement -
- Advertisement -

ನಟಿ ಪೂಜಾ ಹೆಗ್ಡೆ ಗುರುವಾರ ಟ್ವಿಟರ್ ನಲ್ಲಿ ತಮಗಾದ ಕಹಿ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಇಂಡಿಗೋ ಏರ್‌ಲೈನ್ಸ್‌ನ ಉದ್ಯೋಗಿಯ ವರ್ತನೆಯಿಂದ ನಾನು ಬೇಸರಗೊಂಡಿದ್ದೇನೆ ಎಂದು ಪೂಜಾ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ಪೂಜಾ ಹೆಗ್ಡೆ ತೆಲುಗಿನ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರು.ಅವರು ಈಗಾಗಲೇ ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್, ಮಹೇಶ್, ಎನ್‌ಟಿಆರ್ ಮುಂತಾದ ಎಲ್ಲಾ ಸೂಪರ್ ಹೀರೋಗಳೊಂದಿಗೆ ನಟಿಸಿದ್ದಾರೆ.

ಇಂಡಿಗೋ ಏರ್‌ಲೈನ್ಸ್‌ನ ಉದ್ಯೋಗಿಯೊಬ್ಬರು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪೂಜಾ ಆರೋಪಿಸಿದ್ದಾರೆ. ಈ ಕುರಿತು ಅವರು ಟ್ವಿಟರ್​ ನಲ್ಲಿ ಬರೆದುಕೊಂಡಿದ್ದಾರೆ. ಮುಂಬೈನಿಂದ ಹೊರಡುವ ಇಂಡಿಗೋ ವಿಮಾನದಲ್ಲಿ ತನ್ನ ಆಪ್ತ ಸ್ನೇಹಿತರೊಂದಿಗೆ ಪ್ರಯಾಣಿಸುತ್ತಿದ್ದೆ. ಈ ವೇಳೆ ಇಂಡಿಗೋ ವಿಮಾನ ಸಂಸ್ಥೆಯ ಸಿಬ್ಬಂದಿ ಅಸಭ್ಯವಾಗಿ ಮತ್ತು ಅಗೌರವದಿಂದ ವರ್ತಿಸಿದ್ದಾರೆ. ವಿನಾಕಾರಣ ನಮ್ಮ ಮೇಲೆ ದುರಹಂಕಾರ ತೋರಿಸಿದ್ದಾರೆ ಎಂದು ಪೂಜಾ ಟ್ವೀಟ್ ಮಾಡಿದ್ದಾರೆ. ಆತನ ವರ್ತನೆಯಿಂದ ನಾನು ಗಾಬರಿಗೊಂಡೆ ಎಂದಿದ್ದಾರೆ. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆ, ಇಂಡಿಗೋ ಆಡಳಿತ ಮಂಡಳಿಯು ಕ್ಷಮೆಯಾಚಿಸಿದೆ. ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.

- Advertisement -

Latest News

error: Content is protected !!