- Advertisement -
![]()
- Advertisement -
ಭಟ್ಕಳ : ಮನೆಯ ಬಾಗಿಲು ಮುರಿದು ಲಕ್ಷಾಂತರ ರೂ. ಬೆಲೆಯ ಬಾಳುವ ಆಭರಣ ಕಳ್ಳತನದ ಪ್ರಕರಣವು ತಾಲೂಕಿನ ತಗ್ಗರಗೋಡದಲ್ಲಿ ನಡೆದಿದೆ. ಈ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಟ್ಕಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ತಾಲೂಕಿನ ಆಜಾಜ್ ನಗರ ನಿವಾಸಿ ಅಬ್ದುಲ್ ಸತ್ತಾರ್ ಬಂಧಿತ ಆರೋಪಿ ಎಂದು ತಿಳಿದು ಬಂದಿದ್ದು, ಆತನ ಬಳಿಯಿಂದ 104 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 28 ರಂದು ಈತ ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯ ಅವಧಿಯಲ್ಲಿ ತಾಲೂಕಿನ ಜಾಲಿ ರೋಡ್ ತಗ್ಗರಗೋಡದ ಬಿಬಿ ಫಾತಿಮಾ ಅಬ್ದುಲ್ ರಜಾಕ್ ಶೇಖ್ ಎಂಬವರ ಮನೆಯ ಬಾಗಿಲನ್ನು ಒಡೆದು ನಗ-ನಗದು ಕಳ್ಳತನ ಮಾಡಿ ಪರಾರಿಯಾಗಿದ್ದ ಎಂದು ದೂರಲಾಗಿತ್ತು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಭಟ್ಕಳ ನಗರ ಠಾಣೆಯ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
- Advertisement -


