Thursday, June 4, 2026
Homeಕರಾವಳಿಉಪ್ಪಿನಂಗಡಿಯಲ್ಲಿ ಸುಂಟರಗಾಳಿ: ರಾಷ್ಟ್ರೀಯ ಹೆದ್ದಾರಿಗೆ ಉರುಳಿದ ಮರ, ಸಂಚಾರಕ್ಕೆ ಅಡ್ಡಿ

ಉಪ್ಪಿನಂಗಡಿಯಲ್ಲಿ ಸುಂಟರಗಾಳಿ: ರಾಷ್ಟ್ರೀಯ ಹೆದ್ದಾರಿಗೆ ಉರುಳಿದ ಮರ, ಸಂಚಾರಕ್ಕೆ ಅಡ್ಡಿ

- Advertisement -
- Advertisement -

ಉಪ್ಪಿನಂಗಡಿ: ಇಂದು ಬೆಳಿಗ್ಗೆ ಸುಂಟರಗಾಳಿಯೊಂದಿಗೆ ಸುರಿದ ಧಾರಾಕಾರ ಮಳೆಗೆ ಬಾರಿ ಗಾತ್ರದ ಮರವೊಂದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಬಿದ್ದು ರಸ್ತೆ ಸಂಚಾರಕ್ಕೆ ಅಡ್ಡಿಯಾದ ಘಟನೆ ವಳಾಲು ಸಮೀಪದ ನೀರಕಟ್ಟೆಯಲ್ಲಿ ಸಂಭವಿಸಿದೆ.

ಸುಮಾರು ಒಂದು ನಿಮಿಷ ಕಾಲ ಬಾರಿ ವೇಗದ ಸುಂಟರಗಾಳಿ ಬೀಸಿದ ಕಾರಣ ಈ ದುರ್ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ.

ಸ್ಥಳೀಯರಿಂದ ತೆರವು
ಭಾರಿ ಗಾತ್ರದ ಮರ ಬಿದ್ದ ಕಾರಣ ಸುಮಾರು 30 ನಿಮಿಷಗಳಿಗೂ ಹೆಚ್ಚು ಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಸ್ಥಳೀಯರು ಮರ ತೆರವು ಮಾಡುವ ಮೂಲಕ ರಸ್ತೆಯಲ್ಲಿ ಸಂಚಾರಕ್ಕೆ ವ್ಯವಸ್ಥೆ ಮಾಡಿದರು.

- Advertisement -

Latest News

error: Content is protected !!