- Advertisement -
![]()
- Advertisement -
ಬೆಂಗಳೂರು : ಕೊರೊನಾ ಸೋಂಕಿತರಿಗೆ ನೀಡಲಾಗುವ ಪ್ಲಾಸ್ಮಾವನ್ನು ಜೀರೋ ಟ್ರಾಫಿಕ್ ಮೂಲಕ ಬೆಂಗಳೂರಿನಿಂದ ಚೆನ್ನೈ ಆಸ್ಪತ್ರೆಗೆ ಯಶಸ್ವಿಯಾಗಿ ರವಾನಿಸಲಾಗಿದೆ. ಈ ಮೂಲಕ ಭಾರತದಲ್ಲಿ ಇದೇ ಮೊದಲ ಬಾರಿಗೆ ಪ್ಲಾಸ್ಮಾವನ್ನು ಜೀರೋ ಟ್ರಾಫಿಕ್ ಮೂಲಕ ಕೇವಲ 4 ಗಂಟೆ 50 ನಿಮಿಷಕ್ಕೆ ಯಶಸ್ವಿಯಾಗಿ ಸಾಗಿಸಲಾಗಿದೆ.
ಗ್ರೀನ್ ಕಾರಿಡಾರ್ ಮೂಲಕ 348 ಕಿ.ಮೀ ದೂರ ಇರುವ ಚೆನ್ನೈನ ಖಾಸಗಿ ಆಸ್ಪತ್ರೆಗೆ ಪ್ಲಾಸ್ಮಾ ರವಾನೆ ಮಾಡಲಾಗಿದೆ. 348 ಕಿ.ಮೀ ಕ್ರಮಿಸಲು 4 ಗಂಟೆ 50 ನಿಮಿಷ ತೆಗೆದುಕೊಳ್ಳಲಾಗಿದೆ. ಈ ಮೂಲಕ ಹೃದಯ ಯಕೃತ್ ನಂತಹ ಅಂಗಾಂಗಗಳನ್ನು ಮಾತ್ರ ಸಾಗಿಸುತ್ತಿದ್ದ ವ್ಯವಸ್ಥೆಯಲ್ಲಿ ಇದೇ ಮೊದಲ ಬಾರಿ ಪ್ಲಾಸ್ಮಾ ಸಾಗಿಸಲಾಗಿದೆ.
ಪ್ಲಾಸ್ಮಾ ಚಿಕಿತ್ಸೆಯಿಂದ ಕರ್ನಾಟಕದಲ್ಲಿ ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಹೀಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಯು ಕೊರೊನಾ ಗಂಭೀರವಾಗಿರುವ ವೃದ್ಧೆಯೊಬ್ಬರಿಗೆ ಬೆಂಗಳೂರಿನಿಂದ ಪ್ಲಾಸ್ಮಾ ತರಿಸಿಕೊಂಡಿದೆ
- Advertisement -


