Thursday, June 4, 2026
Homeಪ್ರಮುಖ-ಸುದ್ದಿಕೊನೆಗೂ ಡ್ರೋನ್ ಪ್ರತಾಪ್ ಬಂಧನ

ಕೊನೆಗೂ ಡ್ರೋನ್ ಪ್ರತಾಪ್ ಬಂಧನ

- Advertisement -
- Advertisement -

ಬೆಂಗಳೂರು: ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ಡ್ರೋನ್ ಪ್ರತಾಪ್ ನನ್ನು ಪೊಲೀಸರು ಬಂಧಿಸಿದ್ದಾರೆ. ಬಳಿಕ ಠಾಣಾ ಜಾಮೀನು ಮಂಜೂರು ಮಾಡಿ ಬಿಡುಗಡೆ ಮಾಡಲಾಗಿದೆ.

ರಿಚ್ಮಂಡ್ ಸರ್ಕಲ್ ಸಮೀಪ ಸ್ಟಾರ್ ಹೋಟೆಲ್ ಒಂದರಲ್ಲಿ ಜುಲೈ 30 ರವರೆಗೆ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಡ್ರೋನ್ ಪ್ರತಾಪ್ ಅವರನ್ನು ಇರಿಸಲಾಗಿತ್ತು. ಹೋಟೆಲಿಗೆ ವಕೀಲರನ್ನು ಕರೆಸಿಕೊಂಡು ಮಾತುಕತೆ ನಡೆಸುವ ಮೂಲಕ ಡ್ರೋನ್ ಪ್ರತಾಪ್ ನಿಯಮ ಉಲ್ಲಂಘಿಸಿದ್ದರು.

ಈ ಬಗ್ಗೆ ಅಶೋಕ ನಗರ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಸೋಮವಾರ ಡ್ರೋನ್ ಪ್ರತಾಪ್ ಅವರನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ ಬಳಿಕ ಎಚ್ಚರಿಕೆ ನೀಡಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

- Advertisement -

Latest News

error: Content is protected !!