Wednesday, June 24, 2026
Homeಕರಾವಳಿಬೆಳ್ತಂಗಡಿಯಲ್ಲಿ ತನ್ನ ಸ್ವಂತ ಕಚೇರಿ ಉದ್ಘಾಟನೆ ತೆರಳುತ್ತಿದ್ದ ಯುವಕ ಅಪಘಾತಕ್ಕೆ ಬಲಿ

ಬೆಳ್ತಂಗಡಿಯಲ್ಲಿ ತನ್ನ ಸ್ವಂತ ಕಚೇರಿ ಉದ್ಘಾಟನೆ ತೆರಳುತ್ತಿದ್ದ ಯುವಕ ಅಪಘಾತಕ್ಕೆ ಬಲಿ

- Advertisement -
- Advertisement -

ಬೆಳ್ತಂಗಡಿ: ತನ್ನ ಸ್ವಂತ ಕಚೇರಿ ಉದ್ಘಾಟನೆಗೆಂದು ತೆರಳುತ್ತಿದ್ದ ಎಂಜಿನಿಯರ್ ಯುವಕನೋರ್ವ ಅಪಘಾತಕ್ಕೆ ಬಲಿಯಾಗಿರುವ ಘಟನೆ ಬೆಳ್ತಂಗಡಿಯ ಮಾಲಾಡಿ ಸಮೀಪ ಅರ್ಕುಲ ತಿರುವಿನಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಮದ್ದ ನಿವಾಸಿ ಮಾಝಿನ್ (28) ಮೃತಪಟ್ಟ ಯುವಕ.

ಮಾಲಾಡಿ ಸಮೀಪ ಅರ್ತಿಲ ತಿರುವಿನಲ್ಲಿ ಯಾವುದೋ ಅಪರಿಚಿತ ವಾಹನ ಢಿಕ್ಕಿ ಹೊಡೆದಿರುವ ಸಾಧ್ಯತೆ ಕುರಿತು ಅನುಮಾನ ವ್ಯಕ್ತಪಡಿಸಲಾಗಿದೆ.

ಯುವಕನನ್ನು ತಕ್ಷಣ ಸ್ಥಳೀಯರು ಬೆಳ್ತಂಗಡಿ ಸರಕಾರಿ‌ ಆಸ್ಪತ್ರೆಗೆ ರವಾನಿಸಿದ್ದು, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಎಂಜಿನಿಯರ್ ಆಗಿರುವ ಮಾಝಿನ್ ಮದ್ದಡ್ಕದಲ್ಲಿ ಕಚೇರಿ ತೆರೆದಿದ್ದರು. ಹೀಗಾಗಿ ಇಂದು  ಕಚೇರಿ‌ ಉದ್ಘಾಟನೆ ಇಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!