Thursday, June 4, 2026
Homeತಾಜಾ ಸುದ್ದಿಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ- ಕಡಬ ಮೂಲದ ಯುವಕನ ದಾರುಣ ಸಾವು

ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ- ಕಡಬ ಮೂಲದ ಯುವಕನ ದಾರುಣ ಸಾವು

- Advertisement -
- Advertisement -

ಕಡಬ :ಬೆಂಗಳೂರಿನಲ್ಲಿ ಬೈಕ್ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ಆಲಂಕಾರಿನ ಯುವಕನೊಬ್ಬ ಮೃತಪಟ್ಟಿದ್ದು ಸಹ ಸವಾರ ಗಂಭಿರ ಗಾಯಗೊಂಡಿದ್ದಾನೆ. ಮೃತ ಯುವಕನನ್ನು ಕಡಬ ತಾಲುಕಿನ ಆಲಂಕಾರು ಗ್ರಾಮದ ಶರವೂರು ನಿವಾಸಿ ನಂದೀಪ್ ಎಂದು ಗುರುತಿಸಲಾಗಿದೆ.

ಇವರು ಬೆಂಗಳೂರಿನ ಕಂಪೆನಿಯೊಂದರಲ್ಲಿ ಉದ್ಯೋಗದಲ್ಲಿದ್ದು ಬೆಳಿಗ್ಗೆ ಕೆಲಸಕ್ಕೆಂದು ಹಳನೇರಂಕಿಯ ನಿವಾಸಿ ಸ್ನೇಹಿತನೊಂದಿಗೆ ಬೈಕ್ ನಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಟೋ ರಿಕ್ಷಾವೊಂದು ಹಠತಾಗಿ ಬಲಕ್ಕೆ ತಿರುಗಿದಾಗ ಅದಕ್ಕೆ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದು ಈ ಸಂದರ್ಭದಲ್ಲಿ ಹಿಂದಿನಿಂದ ಬಂದ ಲಾರಿ ಯುವಕನ ತಲೆ ಮೇಲೆಯೇ ಸಂಚರಿಸಿದ ಪರಿಣಾಮ ನಂದಿಪ್ ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಸಹ ಸವಾರ ಹಳೆನರಂಕಿ ನಿವಾಸಿ ಯುವಕ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮೃತ ನಂದಿಪ್ ಅವರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

- Advertisement -

Latest News

error: Content is protected !!