Thursday, June 4, 2026
Homeಕರಾವಳಿಹಳೆಯಂಗಡಿ: ಸರಕಾರಿ ಬಸ್ ಗಳ ನಡುವೆ ಅಪಘಾತ; ಕೆಲ ಪ್ರಯಾಣಿಕರಿಗೆ ಗಾಯ

ಹಳೆಯಂಗಡಿ: ಸರಕಾರಿ ಬಸ್ ಗಳ ನಡುವೆ ಅಪಘಾತ; ಕೆಲ ಪ್ರಯಾಣಿಕರಿಗೆ ಗಾಯ

- Advertisement -
- Advertisement -

ಮುಲ್ಕಿ: ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಕೆನರಾ ಬ್ಯಾಂಕ್ ಎದುರುಗಡೆ ಸರಕಾರಿ ಬಸ್ಸುಗಳ ನಡುವೆ ಅಪಘಾತ ನಡೆದಿದ್ದು, ಹನ್ನೆರಡು ಜನ ಗಾಯಗೊಂಡ ಘಟನೆ ಬೆಳಿಗ್ಗೆ ನಡೆದಿದೆ.

ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಹಳೆಯಂಗಡಿ ಬಳಿ ಮಂಗಳೂರು ಡಿಪೋ ಸರಕಾರಿ ಬಸ್ಸಿನ (ಕೆ ಎ 19 ಎಫ್3376)ಹಿಂಭಾಗಕ್ಕೆ ಉತ್ತರ ಕರ್ನಾಟಕ ದ ಸರಕಾರಿ ಬಸ್(ಕೆ17 f19 28)ಡಿಕ್ಕಿ ಹೊಡೆದಿದೆ. 

ಅಪಘಾತದ ರಭಸಕ್ಕೆ ಮಂಗಳೂರು ಡಿಪೋ ಬಸ್ಸು ಹೆದ್ದಾರಿಯಿಂದ ಚರಂಡಿಗೆ ಸರಿದಿದ್ದು, ಸ್ಥಳೀಯ ರಿಕ್ಷಾ ಚಾಲಕ ಯೋಗೀಶ್ ಎನ್ನುವವರು ತಕ್ಷಣ ಸ್ಥಳಕ್ಕೆ ಆಂಬುಲೆನ್ಸ್ ತರಿಸಿ ಗಾಯಾಳುಗಳು ಅಸ್ಪತ್ರೆಗೆ ಸಾಗಿಸಲು ಸಹಾಯ ಮಾಡಿದರು, ಗಾಯಾಳುಗಳ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ. 

ಅಪಘಾತದ ರಭಸಕ್ಕೆ 2 ಬಸ್ಸುಗಳಿಗೆ ಹಾನಿಯಾಗಿದ್ದು, ಸ್ಥಳಕ್ಕೆ ಸುರತ್ಕಲ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

- Advertisement -

Latest News

error: Content is protected !!