Saturday, June 28, 2025
HomeUncategorizedಸುಳ್ಯ: ಭಾರಿ ಮಳೆ, ಪಾದಚಾರಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿ

ಸುಳ್ಯ: ಭಾರಿ ಮಳೆ, ಪಾದಚಾರಿಗೆ ಡಿಕ್ಕಿ ಹೊಡೆದು ಕಾರು ಪಲ್ಟಿ

spot_img
- Advertisement -
- Advertisement -

ಅರಂತೋಡು: ಮಡಿಕೇರಿ ಕಡೆಯಿಂದ ಸುಳ್ಯ ಕಡೆಗೆ ಬರುತ್ತಿದ್ದ ಕಾರೊಂದು ಅರಂತೋಡಿನ ಬಿಳಿಯಾರು ಎಂಬಲ್ಲಿ ಪಾದಚಾರಿಯೊಬ್ಬರಿಗೆ ಡಿಕ್ಕಿ ಹೊಡೆದು, ಪಾದಚಾರಿ ಮೃತಪಟ್ಟ ಘಟನೆ ಇಂದು ಸಂಜೆ ನಡೆದಿದೆ.

ಅಡ್ಕಾರಿನ ವ್ಯಕ್ತಿಯೊಬ್ಬರ ಈ ಕಾರು ಉದಯನಗರದಲ್ಲಿ ಬರುತ್ತಿರುವಾಗ ಪಾದಚಾರಿ ರಸ್ತೆ ದಾಟಿದರೆಂದೂ, ಮಳೆಹನಿ ಬರುತ್ತಿದ್ದುದರಿಂದ ಬ್ರೇಕ್ ಹಿಡಿಯದೇ ಕಾರು ಜಾರಿ ಪಾದಚಾರಿಗೆ ಗುದ್ದಿ ರಸ್ತೆಯ ಇನ್ನೊಂದು ಮಗ್ಗುಲಿಗೆ ಹೋಗಿ ಪಲ್ಟಿಯಾಯಿತು.

ಆ ಸಂದರ್ಭ ಅಲ್ಲಿ ಸೇರಿದ ಯುವಕರು ಕಾರು ಚಾಲಕನ ಮೇಲೆ ಏರಿಹೋಗಿ ತೀವ್ರ ತರಾಟೆಗೆತ್ತಿಕೊಂಡರೆಂದು ತಿಳಿದು ಬಂದಿದೆ.ಕಾರು ಗುದ್ದಿದುದರಿಂದ ಜಖಂಗೊಂಡ ಅಪರಿಚಿತ ಪಾದಚಾರಿಯನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಆ ವೇಳೆಗೆ ಆ ವ್ಯಕ್ತಿ ಮೃತಪಟ್ಟಿದ್ದರು. ಮೃತದೇಹ ಸುಳ್ಯ ಸರಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

- Advertisement -
spot_img

Latest News

error: Content is protected !!