Wednesday, June 24, 2026
Homeಕ್ರೀಡೆಕ್ರಿಕೆಟಿಗ ಮೊಹಮ್ಮದ್ ಶಮಿ ಹೆಂಡತಿಯ ಬೆತ್ತಲೆ ಫೋಟೋ ವೈರಲ್

ಕ್ರಿಕೆಟಿಗ ಮೊಹಮ್ಮದ್ ಶಮಿ ಹೆಂಡತಿಯ ಬೆತ್ತಲೆ ಫೋಟೋ ವೈರಲ್

- Advertisement -
- Advertisement -

ಹೊಸದಿಲ್ಲಿ: 29 ವರ್ಷದ ಬಲಗೈ ವೇಗಿ ಶಮಿ ಅವರ ವಿರಕ್ತ ಪತ್ನಿ ಹಸೀನ್‌ ಜಹಾನ್‌, ಟೀಮ್‌ ಇಂಡಿಯಾ ವೇಗಿಗೆ ಕಾಟ ಕೊಡುವುದನ್ನು ಮುಂದುವರಿಸಿದ್ದು ಭಾನುವಾರ ಇಬ್ಬರ ಅರೆ ನಗ್ನ ಫೋಟೊ ಒಂದನ್ನು ಸೋಷಿಯಲ್‌ ಮೀಡಿಯಾ ವೇದಿಕೆಗಳಾದ ಇನ್‌ಸ್ಟಾಗ್ರಾಮ್‌ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಫೋಟೋಗೆ ಹಿಂದಿಯಲ್ಲಿ ಅಡಿಬರಹ ಬರೆದಿರುವ ಹಸಿನ್, “ನೀನು ಏನೂ ಅಲ್ಲದಿರುವ ವೇಳೆ ನಿನ್ನ ಪಾಲಿಗೆ ನಾನು ಪವಿತ್ರ ಮತ್ತು ಪೂಜನೀಯವಾಗಿದ್ದೆ. ಸದ್ಯ ಒಂದಷ್ಟು ಹೆಸರು ಬರುತ್ತಿದ್ದಂತೆ ನಾನು ನಿನ್ನ ಕಣ್ಣಿಗೆ ಅಪವಿತ್ರಳಾಗಿದ್ದೇನೆ. ಸುಳ್ಳನ್ನು ಹೆಚ್ಚು ಸಮಯ ಮರೆಮಾಚಲು ಸಾಧ್ಯವಿಲ್ಲ. ಹಾಗೇ ಮೊಸಳೆ‌ ಕಣ್ಣೀರನ್ನು ಯಾರೂ ನಂಬುವುದಿಲ್ಲ” ಎಂದು ಬರೆದುಕೊಂಡಿದ್ದಾರೆ.

ಕೊಲ್ಕತಾ ಮೂಲದ ಬಲಗೈ ವೇಗಿಯ ವಿರುದ್ಧ ಅವರ ವಿರಕ್ತ ಪತ್ನಿ 2018ರಲ್ಲಿ ಕೊಲೆ ಪ್ರಯತ್ನ, ವ್ಯಭಿಚಾರ, ದೈಹಿಕ ಹಲ್ಲೆ ಹಾಗೂ ಮ್ಯಾಚ್‌ ಫಿಕ್ಸಿಂಗ್‌ನಂತಹ ಗಂಭೀರ ಆರೋಪಗಳನ್ನು ಮಾಡಿ ದೂರು ದಾಖಲಿಸಿದ್ದರು. ಆದರೆ, ಈ ಯಾವ ದೂರುಗಳಲ್ಲಿಯೂ ಶಮಿ ತಪ್ಪಿತಸ್ತ ಎಂದು ಈವರೆಗೆ ಸಾಬೀತಾಗಿಲ್ಲ. ಆದರೆ, ಸೋಷಿಯಲ್‌ ಮೀಡಿಯಾಗಳಲ್ಲಿ ಶಮಿ ವಿರುದ್ಧ ಆಗಾಗ ಬೌನ್ಸರ್‌ಗಳನ್ನು ಹಸೀನ್‌ ಎಸೆಯುತ್ತಲೇ ಬಂದಿದ್ದು, ಇದೀಗ ಇಬ್ಬರ ಅರೆನಗ್ನ ಫೋಟೊ ಒಂದನ್ನು ಪ್ರಕಟಿಸಿದ್ದಾರೆ.

- Advertisement -

Latest News

error: Content is protected !!